Saturday, February 4, 2023
Homeಚಿತ್ರ ವರದಿರೋಟರಿ ಸ್ವರ್ಣದಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

ರೋಟರಿ ಸ್ವರ್ಣದಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

ಪುತ್ತೂರು:ರೋಟರಿ ಕ್ಲಬ್ ಪುತೂರು ಸ್ವರ್ಣದ ವತಿಯಿಂದ ದ.29 ರಂದು ಕನ್ನಡಕ್ಕೆ ಮೊದಲ ಜ್ಙಾನ ಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯನ್ನು ರೋಟರಿ ಟ್ರಸ್ಟ್ ಹಾಲ್ ಪುತ್ತೂರು ಇಲ್ಲಿ ಆಚರಿಸಲಾಯಿತು.


ಕುವೆಂಪು ರಚಿಸಿದ ‘ ಶ್ರೀ ರಾಮಯಣ ದರ್ಶನಂ’ ಮಹಾ ಕಾವ್ಯದ ಒಂದೊಂದು ಪುಟದಲ್ಲಿರುವ ಚರಣವನ್ನು ವಾಚಿಸಿ ಮಹಾಕವಿಗೆ ನಮನವನ್ನು ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸ್ವರ್ಣ ಇದರ ಪೂರ್ವಾಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಇವರು ಕುವೆಂಪು ಅವರ ಜೀವನದ ಚರಿತ್ರೆಯನ್ನು ಹಾಗೂ ಅವರು ರಚಿಸಿದ ಹಲವಾರು ಸಾಹಿತ್ಯದ ತಿರುಳುಗಳ ಕುರಿತು ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸ್ವರ್ಣದ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಕಾರ್ಯದರ್ಶಿ ಸುರೇಶ್ ಪಿ. ನಿಯೋಜಿತ ಅಧ್ಯಕ್ಷರಾದ ಸುಂದರ ರೈ ಬಲ್ಕಾಡಿ ವೇದಿಕೆಯಲ್ಲಿದ್ದರು. ಅತಿಥಿಗಳಾಗಿ ರೋಟರಿ ಕ್ಲಬ್ 3181ಮಾಜಿ ಸಹಾಯಕ ಗವರ್ನರ್ ಹಾಗೂ ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷರಾದ ಸಂತೋಷ ಶೆಟ್ಟಿ, ಪುತ್ತೂರು ತುಳುಕೂಟದ ಅಧ್ಯಕ್ಷ ಫ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ರೋಟರಿ ಸ್ವರ್ಣದ ಸದಸ್ಯರಾದ ಮಹಾಬಲ ಗೌಡ, ಮನೋಹರ್ ಕುಮಾರ್, ಸುರೇಂದ್ರ ಆಚಾರ್ಯ, ದಿನೇಶ್ ಆಚಾರ್ಯ, ಸನತ್ ಕುಮಾರ್ ರೈ ಕುಂಜಾಡಿ, ಗೋಪಾಲಕೃಷ್ಣ ಆಚಾರ್ಯ, ಸುಭಾಸ್ ರೈ ಬೆಳ್ಳಿಪ್ಪಾಡಿ, ಉದಯ ಆಚಾರ್ಯ, ಪ್ರವೀಣ್ ರೈ ಸಾಂತ್ಯ ಸಹಿತ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!