ಸಹಕಾರಿ ರಂಗದ ವಿಸ್ತೃತ ಪಥದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ

0

ಪುತ್ತೂರು : ಆಡಳಿತ – ಸದಸ್ಯ – ಸಿಬ್ಬಂದಿ ಇದು ಮೂರೂ ಸಹಕಾರಿ ಸಂಸ್ಥೆಯೊಂದರ ಅವಿಭಾಜ್ಯ ಅಂಗಗಳು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ದಲ್ಲಿ ಈ ಮೂರು ಅಂಗಗಳನ್ನು ಸಮಾನವಾಗಿ ಸ್ವೀಕರಿಸಿ, ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು, ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಸಹಕಾರಿ ಸಂಸ್ಥೆ ಪಾತ್ರವಾಗಿದೆ. ಸಂಸ್ಥೆಯ 21ನೇ ಶಾಖೆಯು ಮಾ.5ರಂದು ಕಬಕದ ಶ್ರೀ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.

ಉತ್ತಮ ಉದ್ದೇಶವನ್ನು ಹೊಂದಿ, ಸಮಾನ ಮನಸ್ಕರ ಗುಂಪು ಎಲ್ಲರ ಒಳಿತಿಗಾಗಿ ಒಟ್ಟು ಸೇರಿ ಕಾರ್ಯನಿರ್ವಹಿಸಿಕೊಂಡು, ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಾ ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸಹಕಾರ ಸಂಘದಿಂದ ಭರಿಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಪ್ರಾಕೃತಿಕ ವಿಕೋಪದಡಿ ಸದಸ್ಯರಿಗೆ ಸಹಾಯಧನ, ಸಂಘದ ಶಾಖೆಗಳ ಉದ್ಘಾಟನೆಯ ಸಂದರ್ಭದಲ್ಲಿ ಸಾಧಕರಿಗೆ, ಪ್ರತಿಭಾವಂತರಿಗೆ ಸಮ್ಮಾನ, ಅಂಗವಿಕಲರಿಗೆ ಸಹಾಯಹಸ್ತ ಅನಾರೋಗ್ಯ ಪೀಡಿತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭ ಶ್ರೀ ಗುರುದೇವ ಸಹಕಾರಿ ಸಂಘವು ಆಸ್ಪತ್ರೆಗಳಿಗೆ ವೈದ್ಯಕೀಯ ನೆರವು, ಸದಸ್ಯರಿಗೆ ಇನ್ನಿತರ ಸಹಾಯಹಸ್ತವನ್ನು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮುಂಚೂಣಿಯಲ್ಲಿರುವ ಸಹಕಾರ ಸಂಘವಾಗಿ, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಅನ್ನು ಪಡೆದುಕೊಂಡಿದೆ.

ಸಹಕಾರಿಯ‌ ಸೌಲಭ್ಯಗಳು:

ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ, ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ 1 ವರ್ಷ ಮತ್ತು ಮೇಲ್ಪಟ್ಟು ಠೇವಣಿಗಳಿಗೆ 0.5% ಹೆಚ್ಚುವರಿ ಬಡ್ಡಿ. ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಕೃಷಿಯೇತರ ಸಾಲ ಸೌಲಭ್ಯ, ವೆಸ್ಟರ್ನ್ ಯೂನಿಯನ್ ಮೂಲಕ ವಿದೇಶಿ ಹಣ ವರ್ಗಾವಣೆ, ಆರ್ ಟಿ ಜಿ ಎಸ್ ಠೇವಣಿಗಳು ಟಿಡಿಎಸ್ ನಿಂದ ವಿನಾಯಿತಿ, ಮಲ್ಟಿಸಿಟಿ ಚೆಕ್ / ಆರ್ ಟಿ ಒ ಡಿಡಿ ಸೌಲಭ್ಯ, ಸೇಫ್ ಲಾಕರ್ ಸೌಲಭ್ಯ, ಇ ಸ್ಟಾಂಪಿಂಗ್ ಮೊದಲಾದ ಸೌಲಭ್ಯಗಳಿವೆ. ಭೂ ಅಡಮಾನ ಸಾಲ, ಗೃಹ ಸಾಲ, ವಾಹನ, ವ್ಯವಹಾರ, ವೃತ್ತಿಪರ, ಚಿನ್ನಾಭರಣ, ಮೇಲಿನ ಸಾಲ ಹಾಗೂ ಇತರ ಸಾಲ ಸೌಲಭ್ಯಗಳು ಸಹಕಾರ ಸಂಘದಲ್ಲಿ ಲಭ್ಯವಿದೆ.

ಸಹಕಾರ ಸಂಘದ ಸಾಧನೆ..:

ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ. ವಸಂತ ಬಂಗೇರರವರು ಮುಖ್ಯ ಪ್ರವರ್ತಕ ರಾಗಿ ಹಾಗೂ ಹಿರಿಯ ಸಹಕಾರಿ ಕೆ.ಜಿ. ಬಂಗೇರರವರ ಪ್ರಥಮ ಅಧ್ಯಕ್ಷತೆಯೊಂದಿಗೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ 2007-08ರಲ್ಲಿ ಪ್ರಾರಂಭಗೊಂಡಿತು. ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಪ್ರಸ್ತುತ ನಿವೃತ್ತ ಜಿಲ್ಲಾ ಅರಣ್ಯಸಂರಕ್ಷಣಾಧಿಕಾರಿಯಾಗಿರುವ ಎನ್. ಪದ್ಮನಾಭ ಮಾಣಿಂಜರವರ ಅಧ್ಯಕ್ಷತೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ಪ್ರಸ್ತುತ ಸುಮಾರು 33 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ರೂ 125.೦೦ ಕೋಟಿ ಠೇವಣಿ ಹಾಗೂ ಇದರಲ್ಲಿ 107ಕೋಟಿಯಷ್ಟು ಸಾಲ ನೀಡಿ ಸದಸ್ಯರಿಗೆ 2021-22ರ ವರೆಗೆ 15% ಲಾಭಾಂಶವನ್ನು ನೀಡಿದೆ. 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.675.೦೦ಕೋಟಿ ವ್ಯವಹಾರ ನಡೆಸಿದೆ. ಸಂಘದ ಸೇವೆಗೆ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ರಾಜ್ಯಮಟ್ಟದ ‘ಉತ್ತಮ ಸಹಕಾರ ಸಂಘ ‘ ಪ್ರಶಸ್ತಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ ೬ ವರ್ಷದಿಂದ ‘ಸಾಧನಾ’ ಪ್ರಶಸ್ತಿ, ಯುವವಾಹಿನಿ ಕೇಂದ್ರ ಸಮಿತಿ ಇವರಿಂದ ‘ಸಾಧನಾ ಶ್ರೇಷ್ಠ’ ಪ್ರಶಸ್ತಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ‘ ಬ್ರಹ್ಮ ಶ್ರೀ ಸಹಕಾರ ಸಾಧನ’ ಪ್ರಶಸ್ತಿ, ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ‘ ಸಾಧನಾ’ ಪ್ರಶಸ್ತಿಗಳು ಲಭಿಸಿದೆ.
ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ನಿವೇಶನ ಖರೀದಿಸಿದ್ದು, 3 ಕೋ ರೂ. ವೆಚ್ಚದಲ್ಲಿ ಕೇಂದ್ರ ಕಚೇರಿ ಕಟ್ಟಡ ನಿರ್ಮಾಣ ಹಂತದಲ್ಲಿದೆ.

21ನೇ ಶಾಖೆ ಕಬಕದಲ್ಲಿ ಶುಭಾರಂಭ:

ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಬೆಳುವಾಯಿ, ಕಕ್ಕಿಂಜೆ, ನೆಲ್ಯಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಸಿನಮಕ್ಕಿ, ಸಿದ್ದಕಟ್ಟೆ, ಅಜೆಕಾರು, ಹಿರಿಯಡ್ಕ, ಹೊಸ್ಮಾರು, ಮಂಗಳೂರಿನ ಪಡೀಲ್ ನಲ್ಲಿ ಶಾಖೆಯನ್ನು ಹೊಂದಿದ್ದು ಕಬಕದ ಶ್ರೀ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಮಾ.5ರಂದು 21 ನೇ ಶಾಖೆ ಪ್ರಾರಂಭಗೊಳ್ಳಲಿದೆ.

ಸೇವೆಗಳು:

ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ, ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಹೆಚ್ಚುವ ಬಡ್ಡಿ, ವೆಸ್ಟರ್ನ್ ಯೂನಿಯನ್ ಮೂಲಕ ವಿದೇಶಿ ಹಣ ವರ್ಗಾವಣೆ, ಕೃಷಿಯೇತರ, ಭೂ ಅಡಮಾನ ಸಾಲ, ಗೃಹ, ವಾಹನ, ವ್ಯವಹಾರ, ವೃತ್ತಿಪರ, ಚಿನ್ನಾಭರಣ ಸಾಲ ಹಾಗೂ ಇತರ ಸಾಲ ಸೌಲಭ್ಯ ಲಭ್ಯವಿದೆ.

ಸಾಮಾಜಿಕ ಕಾರ್ಯ:

ಆರ್ಥಿಕ ದುರ್ಬಲ ಕುಟುಂಬದ 43 ಮಕ್ಕಳ ಶಿಕ್ಷಣಕ್ಕೆ 3.99 ಲಕ್ಷ ರೂ. ನೆರವು, ಕೋವಿಡ್ ಸಂದರ್ಭ ಸರಕಾರದ ನಿಧಿಗೆ 50 ಸಾವಿರ ರೂ. ನೀಡಲಾಗಿದೆ. ಸಂಘದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟಲ್ಲಿ ವಿಮಾ ಯೋಜನೆಯಿಂದ ರೂ. 2 ಲಕ್ಷದವರೆಗಿನ ಸಾಲ ಮಾಡಿರುವ ಅವರ ಸಾಲವನ್ನು ಋಣಮುಕ್ತಗೊಳಿಸುವ ವಿಶೇಷ ಯೋಜನೆ ರೂಪಿಸಲಾಗಿದೆ. ಸಂಘದ ಪಿಗ್ಮಿ ಸಂಗಹಕಾರರಿಗೆ ಉತ್ತೇಜನ ನೀಡುವ ಸಲುವಾಗಿ ಶೇ.0.1 ರಂತೆ 1,40 ಲಕ್ಷ ರೂ. ವಿತರಿಸಲಾಗುವುದು. ಎಂಜಿನಿಯರಿಂಗ್& ವೈದ್ಯಕೀಯ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸಂಘದಿಂದ ಭರಿಸಲಾಗಿದೆ. ಪ್ರಾಕೃತಿಕ ವಿಕೋಪದಡಿ ಸದಸ್ಯರಿಗೆ ಸಹಾಯಧನ, ಸಾಧಕರಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಸಮ್ಮಾ‌ನ, ಅಂಗವಿಕಲರಿಗೆ ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡಲಾಗುತ್ತಿದೆ. ಕೋವಿಡ್ ಕಷ್ಟದ ಸಂದರ್ಭ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ನೆರವು ನೀಡಲಾಗಿದೆ.

LEAVE A REPLY

Please enter your comment!
Please enter your name here