ಪೂವಪ್ಪ ಗೌಡ ನಿಧನ

0

ರಾಮಕುಂಜ: ರಾಮಕುಂಜ ಗ್ರಾಮದ ಅಲೆಕ್ಕ ದೊಡ್ಡ ಉರ್ಕ ನಿವಾಸಿ ಪೂವಪ್ಪ ಗೌಡ(75ವ.)ರವರು ಮೇ 18ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಕೃಷಿಕರಾಗಿದ್ದ ಪೂವಪ್ಪ ಗೌಡ ಅವರು ಕಳೆದ 3 ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಮೃತರು ಪತ್ನಿ ಜಾನಕಿ, ಪುತ್ರ ಕೇಶವ ಗೌಡ, ಪುತ್ರಿಯರಾದ ಲೀಲಾವತಿ, ಕುಸುಮ, ವಿನೋದ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ರಾಮಕುಂಜ ಗ್ರಾ.ಪಂ. ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಸದಸ್ಯ ಯತೀಶ್‌ಕುಮಾರ್ ಬಾನಡ್ಕ, ಮಾಜಿ ಅಧ್ಯಕ್ಷ ಪೂವಪ್ಪ ಗೌಡ ಸಂಪ್ಯಾಡಿ, ಕಾಂಗ್ರೆಸ್ ರಾಮಕುಂಜ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ದೊಡ್ಡ ಉರ್ಕ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here