ಪುತ್ತೂರು ಶಾಸಕರಿಗೆ ಬೆಳ್ತಂಗಡಿ ಶಾಸಕರಿಂದ ಅವಮಾನ -ವಸಂತ ಬಂಗೇರ ಆಕ್ರೋಶ

0

ಬೆಳ್ತಂಗಡಿ: ಸಂವಿಧಾನಬದ್ಧವಾಗಿ ಜನರಿಂದ ಗೆದ್ದು ಬಂದ ಪುತ್ತೂರಿನ ಶಾಸಕರನ್ನು ಅವಮಾನಿಸುವ ರೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೀಡಿದ ಹೇಳಿಕೆ ಖಂಡನೀಯ ಎಂದು ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪುತ್ತೂರಿಗೆ ಶಾಸಕರಿಲ್ಲ ಎಂದು ಬೇಸರ ಪಡಬೇಡಿ ನಾನೇ ನಿಮ್ಮ ಶಾಸಕನಂತೆ ಇರುತ್ತೇನೆ ಎಂದು ಹರೀಶ್ ಪೂಂಜ‌ ಪುತ್ತೂರಲ್ಲಿ ಹೇಳಿಕೆ ನೀಡಿರುವುದು ವರದಿಯಾಗಿದೆ. ಪುತ್ತೂರಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ರೈ ಹೀನಾಯವಾಗಿ ಸೋಲಿಸಿರುವುದನ್ನು ಸಹಿಸದ ಹರೀಶ್ ಪೂಂಜ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾಾರೆ. ಅವರ ಈ ಹೇಳಿಕೆ ಅವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅವರಂತೆ ಬೆಳ್ತಂಗಡಿ ಕ್ಷೇತ್ರದ ಜನತೆ ಭಾವಿಸುವುದಾದರೆ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯೇತರರಿಗೆ ಕಳೆದ 5 ವರ್ಷಗಳಿಂದ ಶಾಸಕರಿಲ್ಲ ಎಂದಾಗುತ್ತದೆ. ಅವರು ನಿಜವಾಗಿಯೂ ಕ್ಷೇತ್ರದ ಶಾಸಕರಾಗದೆ ಕೇವಲ ಬಿಜೆಪಿ ಶಾಸಕರಾಗಿ ಇದ್ದು, ಬಿಜೆಪಿಯೇತರರಿಗೆ ಯಾವುದೇ ಸಹಾಯ ಮಾಡಿರಲಿಲ್ಲ ಎಂಬುವುದನ್ನು ಪರೋಕ್ಷವಾಗಿ ಅವರೇ ಹೇಳಿಕೆಯಿಂದ ಒಪ್ಪಿಕೊಂಡಂತಾಗಿದೆ ಎಂದು ಬಂಗೇರ ಹೇಳಿದ್ದಾರೆ.


ಕಳೆದ 5 ವರ್ಷಗಳ ಅವಧಿಯಲ್ಲಿ ಅವರು ಶಾಸಕತ್ವದ ಕೆಲಸಗಳಿಗಿಂತ ಹೆಚ್ಚು ಮರಳು, ಮರ, 40% ಕಮೀಶನ್ ದಂಧೆಗಳಲ್ಲೇ ಮುಳುಗಿ ತಾಲೂಕು ಕಚೇರಿಯನ್ನು ಭ್ರಷ್ಟ ಇಲಾಖೆಯನ್ನಾಗಿಸಿದ್ದರು ಎಂಬುದು ಬಹಿರಂಗ ಸತ್ಯವಾಗಿದೆ. ಹೀಗಿರುವಾಗ ಅವರಿಗೆ ಶಾಸಕರಾಗಿ ಮಾಡಬೇಕಾದ ಕೆಲಸ ಮಾಡಲು ಸಮಯ ಎಲ್ಲಿಂದ ಸಿಗಬೇಕು ?. ಮುಂದಿನ 5 ವರ್ಷ ತಾಲೂಕಿನಲ್ಲಿ ಯಾರು ಶಾಸಕರಿಲ್ಲ ಎಂದು ಭಯ ಪಡುವ ಅಗತ್ಯವಿಲ್ಲ . ಯಾಕೆಂದರೆ ಸಂವಿಧಾನವನ್ನು ಎತ್ತಿಹಿಡಿಯುವ ಕಾಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಕಾಗ್ರೆಸ್ ಪಕ್ಷ ತಾನು ನೀಡಿದ ಗ್ಯಾರಂಟಿಯನ್ನು ಪಕ್ಷ, ಧರ್ಮ, ಜಾತಿ ಭೇದವಿಲ್ಲದೆ ಜಾರಿಗೊಳಿಸಲಿದೆ. ಈ ಗ್ಯಾಾರಂಟಿಯನ್ನು ಬೆಳ್ತಂಗಡಿಯ ಜನತೆಗೆ ಒದಗಿಸಲು ನಾನು ಸಂಪೂರ್ಣ ಬದ್ದನಿದ್ದೇನೆ ಎಂದು ತಿಳಿಸಿರುವ ವಸಂತ ಬಂಗೇರ ಅವರು ಇನ್ನು ಮುಂದೆ ಯಾರೂ ವಿದ್ಯುತ್ ಬಿಲ್ಲು ಕಟ್ಟ ಬೇಡಿ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಜನತೆಗೆ ಕರೆ ನೀಡುವುದು ಹಾಸ್ಯಾಸ್ಪದ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲಷ್ಟೇ ಅದು ಜಾರಿಯಾಗುತ್ತದೆ ವಿನಃ ನಳಿನ್ ಕುಮಾರ್ ಕಟೀಲರಿಂದ ಉಚಿತ ವಿದ್ಯುತ್ ಒದಗಿಸಲು ಸಾಧ್ಯವಿಲ್ಲ. ಅವರಿಗೆ ಸಾಧ್ಯವಿದ್ದರೆ ಕೇಂದ್ರ ಸರಕಾರದಿಂದ ನರೇಂದ್ರ ಮೋದಿಯವರು ಗ್ಯಾಾರಂಟಿ ನೀಡಿದ 15 ಲಕ್ಷ ರೂಗಳನ್ನು ಎಲ್ಲರ ಖಾತೆಗೆ ಜಮೆ ಮಾಡಿಸಲಿ. ವರ್ಷಕ್ಕೆ 2 ಕೋಟಿಯಂತೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಿಸಲಿ. ಬಿಜೆಪಿ ನೀಡಿದ್ದ ಆಶ್ವಾಸನೆ ಈಡೇರಿಸಲಾಗದ ಇವರು ಕಾಂಗ್ರೆಸ್ ಗ್ಯಾಾರಂಟಿಗಳ ಜಾರಿ ಮಾಡುವುದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಯಾಕೆಂದರೆ ಭರವಸೆ ನೀಡಿ ವಂಚನೆ ಮಾಡುವುದು ಬಿಜೆಪಿಯ ನಡೆಯೇ ಹೊರತು ಕಾಂಗ್ರೆಸ್ ಸರಕಾರದ ನಡತೆಯಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here