ಮಹಾಲಿಂಗೇಶ್ವರ ದೇವಳ ವಠಾರದ ಗಣೇಶೋತ್ಸವಕ್ಕೆ ವಿಗ್ರಹ ಮುರ್ಹೂತ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ ಶ್ರೀ ಗಣೇಶೋತ್ಸವಕ್ಕೆ ವಿಗ್ರಹ ಮುರ್ಹೂತ ಕಾರ್ಯಕ್ರಮ ಆ.4ರಂದು ಬೆಳಗ್ಗೆ ಬೊಳುವಾರಿನಲ್ಲಿ ನಡೆಯಿತು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗಣಪತಿ ಗುಡಿಯಲ್ಲಿ ಸಂಕಲ್ಪ ಪ್ರಾರ್ಥನೆ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕರಾಗಿರುವ ವ್ಯವಸ್ಥಾಪನಾ ಸಮಿತಿ ಸದಸ್ಯ ವೇ.ಮೂ.ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿದರು. ಬಳಿಕ ಸಮಿತಿಯ ವತಿಯಿಂದ ಮಹಾಲಿಂಗೇಶ್ವರ ದೇವರ ಸತ್ಯಧರ್ಮ ನಡೆಯಲ್ಲಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶ್ರೀ ಮಹಾಮ್ಮಾಯಿ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ, ಬೊಳುವಾರು ಓಂ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ನಡೆಯಿತು.


ಬೊಳುವಾರಿನಲ್ಲಿ ವಿಗ್ರಹ ರಚನೆ ಮುಹೂರ್ತ:
ದೇವಸ್ಥಾನಗಳಲ್ಲಿ ಪ್ರಾರ್ಥನೆ ಬಳಿಕ ಬೊಳುವಾರಿನಲ್ಲಿ ಶಿಲ್ಪಿ ಶ್ರೀನಿವಾಸ ಪ್ರಭು ಅವರು ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ ಬನ್ನೂರು, ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ ಮೂಲ್ಯ, ನೀಲಂತ್ , ಚಂದ್ರಶೇಖರ್, ಅಶೋಕ್ ಕುಂಬ್ಲೆ, ವಿದ್ಯಾಗೌರಿ, ದಯಾನಂದ ಪಿ, ಮಲ್ಲೇಶ್ ಆಚಾರ್ಯ, ರಾಮಚಂದ್ರ ಕಾಮತ್, ಅಜಿತ್ ರೈ ಹೊಸಮನೆ, ಶಿವಾನಂದ ಪ್ರಭು, ಪವನ್ ಕುಮಾರ್ ಬೊಳುವಾರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here