ಕೆ.ಎಸ್.ಸಿ.ಎ ಅಂಡರ್-19 ರಾಜ್ಯ ಮಹಿಳಾ ಕ್ರಿಕೆಟ್ ಸಂಭವನೀಯ ಪಟ್ಟಿಯಲ್ಲಿ ಪುತ್ತೂರಿನ ಅನಘ

0

ಬರಹ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆ.ಎಸ್.ಸಿ.ಎ) ಇವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಿದ ಅಂಡರ್ 19 ರಾಜ್ಯ ಮಹಿಳಾ ಕ್ರಿಕೆಟ್ ಸಂಭವನೀಯ ಆಟಗಾರ್ತಿಯರ ಪಟ್ಟಿಯಲ್ಲಿ ಅಲ್ ರೌಂಡ್ ಆಟಗಾರ್ತಿಯಾಗಿ ಪುತ್ತೂರಿನ 17 ವರ್ಷದ ಅನಘ ಕೆ.ಎನ್.ರವರು ಸ್ಥಾನ ಪಡೆದಿದ್ದಾರೆ.


ಪ್ರತಿಭಾವಂತೆ ಅನಘರವರು ಪ್ರಸ್ತುತ ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕ್ರೀಡಾ ಪ್ರತಿಭೆಗಳ ಸ್ವರ್ಗವೆನಿಸಿದ ಫಿಲೋಮಿನಾ ವಿದ್ಯಾಸಂಸ್ಥೆಯನ್ನು ಆರಿಸಿದ ಅನಘರವರು ಮೊದಲಿಗೆ ಅಥ್ಲೆಟಿಕ್ ಕ್ರೀಡೆಯನ್ನು ಆರಿಸಿದ್ದರು. ಆದರೆ ಅನಘರವರ ಪ್ರತಿಭೆಯನ್ನು ಗಮನಿಸಿದ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಅನಘರವರನ್ನು ಅಥ್ಲೆಟಿಕ್ಸ್ ಜೊತೆಗೆ ಕ್ರಿಕೆಟ್ ರಂಗದಲ್ಲೂ ಮುಂದುವರೆಯಲು ಪ್ರೋತ್ಸಾಹವಿತ್ತರು. ಕ್ರಿಕೆಟ್ ಲೋಕದಲ್ಲಿ ಎಡಗೈ ಆಟಗಾರರಿಗೆ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಅನಘರವರೂ ಕೂಡ ಓರ್ವೆ ಎಡಗೈ ಆಟಗಾರ್ತಿಯಾಗಿದ್ದು ಅನಘರವರಿಗೆ ವೇಗದ ಬೌಲಿಂಗ್ ಗೆ ಗಮನಕೊಡುವಂತೆ ಎಲ್ಯಾಸ್ ಪಿಂಟೋರವರು ಸೂಚಿಸಿ ತರಬೇತಿ ನೀಡಿದ್ದರು.


ಚುರುಕಿನ ಫಿಲ್ಡಿಂಗ್ ಗೂ ಸೈ:
ಅನಘರವರು ಅಥ್ಲೆಟಿಕ್ ಆಟಗಾರ್ತಿಯಾಗಿದ್ದರಿಂದ ಕ್ರಿಕೆಟ್ ಮೈದಾನದಲ್ಲಿನ ಚುರುಕಿನ ಕ್ಷೇತ್ರ ರಕ್ಷಣೆಗೆ ಇದು ಅಡಿಪಾಯವಿಟ್ಟಂತಾಗಿದೆ. ಎಡಗೈ ವೇಗದ ಬೌಲರ್, ಚುರುಕಿನ ಫಿಲ್ಡರ್ ಜೊತೆಗೆ ಎಡಗೈ ಬ್ಯಾಟರ್ ಆಗಿಯೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲವರಾಗಿದ್ದಾರೆ ಅನಘರವರು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಬೆಂಗಳೂರಿನ ಕೆ.ಎಸ್.ಸಿ.ಎ ಆಶ್ರಯದಲ್ಲಿ ನಡೆದ ಮಹಿಳಾ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಬೆಂಗಳೂರಿನ ಹಮ್ಮಂಡ್ಸ್ ತಂಡದ ಪರ ಆಡಿ ಅತ್ತ್ಯುತ್ತಮ ಪ್ರದರ್ಶನ ನೀಡಿ ಮಿಂಚಿರುವುದಾಗಿದೆ. ಅನಘರವರು ತಂದೆ ಪ್ರಗತಿ ಲೇಔಟ್ ನಿವಾಸಿ, ಕ್ಯಾಂಪ್ಕೋ ಉದ್ಯೋಗಿ ನವೀನ್ ಕುಮಾರ್ ಹಾಗೂ ತಾಯಿ ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಕವಿತಾ ಡಿ.ಎಂರವರ ಪುತ್ರಿ.

LEAVE A REPLY

Please enter your comment!
Please enter your name here