ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ

0

ಉಪ್ಪಿನಂಗಡಿ : ಭಾರತರತ್ನ ಪುರಸ್ಕೃತರಾದ,ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನದ ಸವಿ ನೆನಪಿಗಾಗಿ ಸೆಪ್ಟೆಂಬರ್ 5 ರಂದು ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಬಹಳ ವಿಜೃಂಭರಣೆಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

ಶಿಕ್ಷಕರಿಗೆ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡು,ಅವರಿಗೆ ಲೇಖನಿ ಹಾಗು ಗುಲಾಬಿಯನ್ನು ನೀಡಿ ಗೌರವಿಸಿದರು.ಹತ್ತನೇ ತರಗತಿಯ ಅಮತುನೂರ್ ಸಲೀಂ ಮಾತನಾಡಿ ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ- ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ.ಶಿಕ್ಷಕರು ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿಯೊಂದು ಮಗುವಿನ ಬಾಳನ್ನು ಬೆಳಗುವವರಾಗಿರುತ್ತಾರೆ.ಅವರನ್ನು ಗೌರವಿಸುವುದು ವಿದ್ಯಾರ್ಥಿಗಳಾದ ನಮ್ಮೆಲ್ಲರ ಆದ್ಯಾ ಕರ್ತವ್ಯ ಎಂದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಸೇವೆಯನ್ನು ಸ್ಮರಿಸುವ ಹಾಡನ್ನು ಹಾಡಿದರು.ಶಿಕ್ಷಕರಿಗಾಗಿ ಅನೇಕ ಮನೋರಂಜನೆಯ ಆಟಗಳನ್ನು ಏರ್ಪಡಿಸಿ ವಿಜೇತರಾದ ಗುರುಗಳಿಗೆ ಬಹುಮಾನವನ್ನು ನೀಡಿದರು.ಶಿಕ್ಷಕ-ಶಿಕ್ಷಕೇತರ ವೃಂದದವರು ಉತ್ಸಾಹದಿಂದ ಆಟಗಳಲ್ಲಿ ಪಾಲ್ಗೊಂಡರು.ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ, ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಸುಹಾಸ್
ಬನಾಕರ್ ನಿರೂಪಿಸಿ,ಪ್ರಣಮ್ಯ ಕಾಮತ್ ಸ್ವಾಗತಿಸಿ,ಮೈನಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here