





ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಲಂಚ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಕಳೆದ 2 ವರ್ಷಗಳಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ನಡೆಸುತ್ತಿದ್ದು, ಈ ವೇದಿಕೆಯ ಜನಜಾಗೃತಿ ಆಂದೋಲನಕ್ಕೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೆಂಬಲ ವ್ಯಕ್ತಪಡಿಸಿದ್ದಾರೆ.



ಸೆ.5ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಳ್ಯ ಸುದ್ದಿಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ವರದಿಗಾರರಾದ ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಕುಶಾಂತ್ ಕೊರತ್ಯಡ್ಕರವರು ಜನಾಂದೋಲನದ ಫಲಕವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಅಭಿಯಾನದ ವಿವರ ನೀಡಿದರು.
ಈ ಸಂದರ್ಭ ಅರಂತೋಡಿನಲ್ಲಿ ಗ್ರಾಮ ಕರಣಿಕರೊಬ್ಬರು ಖಾತೆ ಬದಲಾವಣೆಯ ಪೂರಕ ದಾಖಲೆಗಾಗಿ ಗ್ರಾಮಸ್ಥರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಘಟನೆಯನ್ನು ಉಲ್ಲೇಖಿಸಿದ ಡಿಸಿಯವರು ಲಂಚದ ಆಸೆಗೆ ಯಾರೂ ಒಳಗಾಗಬಾರದು ಎಂದರು.







 
            