ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪರೀಕ್ಷಾ ತಯಾರಿ ತರಬೇತಿ ಕಾರ್ಯಗಾರ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಪರೀಕ್ಷೆಗೆ ತಯಾರಿ ಬಗೆಗಿನ ಕಾರ್ಯಗಾರವನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟ ಸಮಿತಿ ಸದಸ್ಯ, ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಪ್ರತಿ ಮಗು ಮತ್ತು ಪೋಷಕರು ಬೆಳಗ್ಗೆಯಿಂದ ಸಂಜೆ ತನಕ ಸಮಯದ ಪಟ್ಟಿಯನ್ನು ತಯಾರಿಸಿ ಎಲ್ಲಾ ಪಾಠಗಳು ಓದುವ ಹಾಗೆ ತಯಾರಿ ಮಾಡಿಕೊಂಡು ಒತ್ತಡ ರಹಿತ ಓದಿನ ಕಡೆ ಗಮನ ಕೊಡಬೇಕು ಮತ್ತು ಮೊಬೈಲ್ ಬಿಟ್ಟು ಕಲಿಕೆ ಕಡೆ ಗಮನ ಜಾಸ್ತಿ ಆಗಲಿ” ಎಂದರು.


ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಪ್ರಾಸ್ತವಿಕವಾಗಿ ಮಾತನಾಡಿ “ಪರೀಕ್ಷೆ ಎಂದಾಗ ಯುದ್ಧಕಾಲ ಶಸ್ತ್ರ ಅಭ್ಯಾಸ ಆಗಬಾರದು. ಪ್ರತಿ ದಿನ ಶಾಲಾ ಕೆಲಸ ನಿಯಮಿತವಾಗಿ ನಡೆಯಬೇಕು.ಪರೀಕ್ಷೆಯನ್ನು ಖುಷಿಯಲ್ಲಿ ಎದುರಿಸಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ಸ್ವಾಗತಿಸಿ, ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here