ಎ.6ರವರಗೆ ಕ್ಯಾಂಪ್ಕೋ ಖರೀದಿ ವ್ಯವಹಾರ ಸ್ಥಗಿತ-ಹಸಿ ಕೊಕ್ಕೊ ಖರೀದಿ ಮುಂದುವರಿಕೆ, ಎ.8ರ ಬಳಿಕ ಬಿಲ್ಲಿಂಗ್

0

ಪುತ್ತೂರು: ವಾರ್ಷಿಕ ಲೆಕ್ಕಾಚಾರದ ಪ್ರಯುಕ್ತ ಮಾ.25ರ ಸೋಮವಾರ ಅಡಿಕೆ ಹಾಗೂ ಕೊಕ್ಕೊ ಖರೀದಿಗೆ ಕೊನೆಯ ದಿನವಾಗಿದ್ದು ಮಾ.26ರಿಂದ ಎ.6ರವರೆಗೆ ವಾರ್ಷಿಕ ಲೆಕ್ಕಾಚಾರದ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ತಂತ್ರಾಂಶವನ್ನು ERP ಗೆ ಪರಿವರ್ತಿಸುವ ಸಲುವಾಗಿ ಯಾವುದೇ ವ್ಯವಹಾರ ಇರುವುದಿಲ್ಲ. ಆದರೆ ಹಸಿ ಕೊಕ್ಕೊ ಬೀಜವನ್ನು ಸಂರಕ್ಷಿಸಲು ಸದಸ್ಯರಿಗೆ ಕಷ್ಟಸಾಧ್ಯವಾಗಿರುವುದರಿಂದ ಮಾ.26ರಿಂದ ಹಸಿ ಕೊಕ್ಕೊ ಬೀಜವನ್ನು ನಿರಂತರವಾಗಿ ಖರೀದಿಸಲು ತೀರ್ಮಾನಿಸಲಾಗಿದೆ. ಕ್ಯಾಂಪ್ಕೊ ವತಿಯಿಂದ ಎ.8ರ ಬಳಿಕ ಬಿಲ್ಲಿಂಗ್ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 6366875020 ಸಂಪರ್ಕಿಸಬಹುದು ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here