ಪುತ್ತೂರು: ನೀರಿಲ್ಲದೆ ಜೀವನವಿಲ್ಲ. ನೀರಿದ್ದರೆ ನಾಳೆಯಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್‌ನ ವತಿಯಿಂದ ʼಜಲ ಆಂದೋಲನ’ವು ಮಾ.28ರಂದು ಚಾಲನೆ ದೊರೆಯಲಿದೆ.
ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ ಚಾಲನೆ ನೀಡಲಿದ್ದಾರೆ. ನಂತರ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ನೀರು ಉಳಿಸಿ ಜಲ ಆಂದೋಲನದ ಮೂಲಕ ಜಾಗೃತಿಯ ಅರಿವು ಮೂಡಿಸಲಾಗುವುದು. ಒಂದು ಹನಿ ನೀರನ್ನು ಉತ್ಪಾದಿಸುವ ಶಕ್ತಿ ನಮಗಿಲ್ಲದೇ ಇದ್ದು ಹಾಳು ಮಾಡುವ ಅಧಿಕಾರವೂ ನಮಗಿಲ್ಲ. ಹೀಗಾಗಿ ಎಲ್ಲಿಯಾದರೂ ನೀರು ಪೋಲಾಗುವುದು ಕಂಡರೆ ಅದಕ್ಕೆ ಸಂಬಂಧಪಟ್ಟವರಿಗೆ ತಿಳಿಸಿ ಜೀವ ಜಲವನ್ನು ಸಂರಕ್ಷಿಸುವಲ್ಲಿ ಸಹಕರಿಸುವ ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸಲಾಗುವುದು ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.