ಪುತ್ತೂರು ನಗರಸಭೆ ಸಿಎನ್‌ಜಿ ಘಟಕ ವೀಕ್ಷಣೆ ಮಾಡಿದ ರಾಜ್ಯದ ವಿವಿಧ ನಗರ, ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು

0

ಪುತ್ತೂರು: ದೇಶದಲ್ಲೇ ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಘಟಕವಾಗಿ ಮೂಡಿ ಬಂದಿರುವ ಪುತ್ತೂರು ನಗರಸಭೆ ಡಂಪಿಂಗ್ ಯಾರ್ಡ್‌ನಲ್ಲಿರುವ ಹಸಿ ಕಸದಿಂದ ಸಿಎನ್‌ಜಿ ಗ್ಯಾಸ್ ಉತ್ಪಾದನಾ ಘಟಕಕ್ಕೆ ರಾಜ್ಯದ ವಿವಿಧ ಸ್ಥಳೀಯಾಡಳಿತದ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಪರಿಸರ ಅಭಿಯಂತರುಗಳು ಡಿ.31ರಂದು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


ಬೆಂಗಳೂರು ಪೌರಾಡಳಿತ ನಿದೇಶನಾಲಯದಿಂದ ಸೂಚನೆಯಂತೆ ತರಬೇತಿ ಕಾರ್ಯಕ್ರಮವಾಗಿ ಡಿ.31ಕ್ಕೆ ಅಧಿಕಾರಿಗಳು ಪುತ್ತೂರು ನಗರಸಭೆ ಡಂಪಿಂಗ್ ಯಾರ್ಡ್‌ಗೆ ಭೇಟಿ ನೀಡಿದರು.

ಈ ಸಂದರ್ಭ ತರಬೇತಿ ಸಂಯೋಜಕರು ಅಶ್ವಿನಿ ಬಿ.ಜೆ ಜೊತೆಗಿದ್ದರು. ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ಇತರ ಅಧಿಕಾರಿಗಳು ಘಟಕದ ಕುರಿತು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here