ಮಕ್ಕಳಿಗೆ ಭಯಮುಕ್ತ ಬದುಕು ನೀಡಬೇಕು: ಕ್ಯಾ. ಬ್ರಿಜೇಶ್ ಚೌಟ
ಉಪ್ಪಿನಂಗಡಿ: ಭಾರತ ದೇಶ ವಿಶ್ವದ ನಾಯಕತ್ವವನ್ನು ವಹಿಸುವ ಹೊಸ್ತಿಲಲ್ಲಿದ್ದು, ದೇಶದ ಪ್ರತಿಯೊಂದು ಮಗುವೂ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಬಲ ಶಕ್ತಿಯಾಗಿ ಮೂಡಿಬರಬೇಕಾಗಿದೆ . ಈ ಕಾರಣಕ್ಕೆ ಮಕ್ಕಳಿಗೆ ಭಯಮುಕ್ತ ಬದುಕು ನೀಡಬೇಕು. ಮುಂದಕ್ಕೆ ಎದುರಾಗುವ ಯಾವುದೇ ಸಮಸ್ಯೆಗೆ ಹೆದರದೆ ಮುನ್ನುಗುವ ಛಲ ಮಕ್ಕಳಲ್ಲಿರಬೇಕು. ಈ ನಿಟ್ಟಿನಲ್ಲಿ ಶ್ರೀ ರಾಮ ಮತ್ತು ಆಂಜನೇಯ ದೇವರುಗಳ ಕೃಪೆ ದೇಶವಾಸಿಗರಿಗೆ ಲಭಿಸಲಿ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಸ್ಥಾಪಿಸಲಾದ ಶ್ರೀ ರಾಮ ಆಂಜನೇಯ ಮೂರ್ತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಕೃಷ್ಣ ಭಟ್ ಮಾತನಾಡಿ, ದೇಶದ ಆಶಾಕಿರಣಗಳಾಗಿರುವ ಎಳೆಯ ಮಕ್ಕಳಲ್ಲಿ ಋಣಾತ್ಮಕತೆಯನ್ನು ಕಳೆದು ಕ್ಷಾತ್ರ ತೇಜಸ್ಸನ್ನು ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ಸ್ಥಾಪಿಸಲಾದ ಶ್ರೀ ರಾಮ ಮತ್ತು ಆಂಜನೇಯ ದೇವರ ಕೃಪೆ ಲಭಿಸುವಂತಾಗಲಿದೆ ಎಂದರು.
ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ. ತಾಳ್ತಜೆ ವಸಂತ ಕುಮಾರ ರಾಮರಕ್ಷಾ ನಿಧಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ , ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ , ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ. ಸುಧಾ ರಾವ್, ಶ್ರೀ ರಾಮ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ. ರಾಧಾ, ಶಾಲಾ ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ತೇಜಾಕ್ಷಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದಪ್ಪ ಮೂಲ್ಯ, ಸುನಿಲ್ ಕುಮಾರ್ ದಡ್ಡು, ಸುಂದರ ಶೆಟ್ಟಿ ಎಂಜಿರಪಳಿಕೆ, ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ,, ಶ್ರೀಮತಿ ಬೇಬಿ ಸೋಮನಾಥ್ ಶೆಟ್ಟಿ, ಜಯಶ್ರೀ ಜನಾರ್ದನ್, ಕೆ. ರಾಘವೇಂದ್ರ ನಾಯಕ್, ಸುಧಾಕರ ಶೆಟ್ಟಿ, ಯು. ರಾಜೇಶ್ ಪೈ, ಕೈಲಾರ್ ರಾಜಗೋಪಾಲ ಭಟ್, ಜಯಂತ ಪೊರೋಳಿ, ಸುರೇಶ್ ಅತ್ರೆಮಜಲು, ಗುಣಕರ ಅಗ್ನಾಡಿ, ಶಶಿಧರ್ ಶೆಟ್ಟಿ,ರವೀಂದ್ರ ಆಚಾರ್ಯ, ಜಗದೀಶ್ ಶೆಟ್ಟಿ ಸುಬ್ರಾಯ ಪುಣಚ ಮತ್ತಿತರರು ಭಾಗವಹಿಸಿದ್ದರು.