ಅಡಿಕೆ ಖರೀದಿಸಿ 2.76 ಕೋಟಿ ರೂ.ವಂಚನೆ : ಬೆಟ್ಟಂಪಾಡಿ ಪಾರಸ್ ಟ್ರೇಡರ್ಸ್ ಮಾಲಕರಿಂದ ಪೊಲೀಸರಿಗೆ ದೂರು

0

ಪುತ್ತೂರು: ಛತ್ತೀಸ್‌ಘಡ ಮೂಲದ ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್ ಎಂಬವರ ಮಾಲೀಕತ್ವದ ಕಂಪನಿಯವರು ಅಡಿಕೆ ಖರೀದಿಸಿ 2.76 ಕೋಟಿ ರೂ.ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಟ್ಟಂಪಾಡಿಯ ಪಾರರ್ಸ್ ಟ್ರೇಡರ್ಸ್ ಮಾಲಕ ಕಮಲ್ ಕಾಂತ್ ಶರ್ಮಾ ಎಂಬವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಂಗಳೂರು ಭಗವತೀನಗರ ಮಣ್ಣಗುಡ್ಡದಲ್ಲಿ ವಾಸವಾಗಿರುವ ಕಮಲ್ ಕಾಂತ್ ಶರ್ಮಾ (39ವ.)ಎಂಬವರು ಬೆಟ್ಟಂಪಾಡಿ ಗ್ರಾಮದ ಬೆಟ್ಟಂಪಾಡಿ ಎಂಬಲ್ಲಿ ಪಾರಸ್ ಟ್ರೇಡರ್ಸ್ ಎಂಬ ಅಡಿಕೆ ಗಾರ್ಬಲ್ ನಡೆಸುತ್ತಿದ್ದು ಅಡಿಕೆ ವ್ಯವಹಾರವನ್ನು ಛತ್ತೀಸ್‌ಘಡದ ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್‌ರವರ ಮಾಲೀಕತ್ವದ ಕಂಪೆನಿಯೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಅವರು 13.12.2024ರಂದು ಇನ್ ವಾಯಿಸ್ ನಂಬ್ರ 55ರಲ್ಲಿ 230 ಬ್ಯಾಗ್‌ನಲ್ಲಿ 14.950 ಕೆಜಿ ಅಡಿಕೆಯನ್ನು ರೂ 46,೦೦,050 ರಂತೆ , ಇನ್ ವಾಯಿಸ್ ನಂಬ್ರ

56ರಲ್ಲಿ 230 ಬ್ಯಾಗ್‌ನಲ್ಲಿ 14.950 ಕೆಜಿ ಅಡಿಕೆಯನ್ನು ರೂ 46,00,050 ರಂತೆ, 23.12. 2024 ರಂದು ಇನ್ ವಾಯಿಸ್ ನಂಬ್ರ 57 ರಲ್ಲಿ 230 ಬ್ಯಾಗ್‌ನಲ್ಲಿ 14.950 ಕೆಜಿ ಅಡಿಕೆಯನ್ನು ರೂ 46,00,050ರಂತೆ, ಇನ್ ವಾಯಿಸ್ ನಂಬ್ರ 58ರಲ್ಲಿ 230 ಬ್ಯಾಗ್‌ನಲ್ಲಿ 14.950 ಕೆಜಿ ಅಡಿಕೆಯನ್ನು ರೂ 46,00,050 ರಂತೆ ಲಲಿತ ಜೈನ್ ಓಂ ಶ್ರೀ ಅಪಾರ್ಟ್ ಮೆಂಟ್ ಶಂಕರನಗರ ರಾಯ್ಪುರ ಛತ್ತೀಸ್‌ಘಡ್‌ರವರ Lalit Info Media Technology Chattisgarh ಅಂಗಡಿಗೆ ಟ್ರಾನ್ಸ್ ಪೋರ್ಟ್ ಮಾಡಿದ್ದಾರೆ.


4.01.2025ರಂದು ಇನ್ ವಾಯಿಸ್ ನಂಬ್ರ 59 ರಲ್ಲಿ ಒಟ್ಟು 230 ಬ್ಯಾಗ್ ನಲ್ಲಿ 14.950 ಕೆಜಿ ಅಡಿಕೆಯನ್ನು ರೂ.46,00,050 ರಂತೆ , ಇನ್ ವಾಯಿಸ್ ನಂಬ್ರ 60ರಲ್ಲಿ 230 ಬ್ಯಾಗ್‌ನಲ್ಲಿ 14.950 ಕೆಜಿ ಅಡಿಕೆಯನ್ನು ರೂ 46,00,050 ರಂತೆ ಪ್ರೇಕ್ಷಾ ಜೇನ್ ಗಂಡ:ಲಲಿತ್ ಕುಮಾರ್ ಜೈನ್ ಏ-401 ಓಂ ಶ್ರೀ ಅಪಾರ್ಟ್ ಮೆಂಟ್ ಶಂಕರನಗರ ರಾಯ್ಪುರ ಛತ್ತೀಸ್‌ಘಡ್‌ರವರ ಮಾಲಕತ್ವದಲ್ಲಿರುವ Lalit Food Products Chattisgarth ಅಂಗಡಿಗೆ ಟ್ರಾನ್ಸ್ ಪೋರ್ಟ್ ಮಾಡಿರುತ್ತಾರೆ. ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್‌ರವರು ಒಟ್ಟು ರೂ.2,76,00,300 ಬೆಲೆಯ ಅಡಿಕೆಯನ್ನು ಖರೀದಿಸಿಕೊಂಡು ಹಣವನ್ನು ನೀಡದೇ ಹಣವನ್ನು ಕೇಳಿದಾಗ ಇಂದಲ್ಲ ನಾಳೆ ನೀಡುತ್ತೇನೆ ಎಂದು ಸತಾಯಿಸುತ್ತಾ ದಿನ ದೂಡುತ್ತಾ ಬಂದಿರುತ್ತಾರೆಯೇ ವಿನಹ ಈ ತನಕ ಸದ್ರಿ ಹಣವನ್ನು ನೀಡಿರುವುದಿಲ್ಲ. ಅವರಿಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಕೆಲವು ದಿನಗಳಿಂದ ಮೊಬೈಲ್ ಪೋನ್ ಸ್ವಿಚ್ ಆಪ್ ಮಾಡಿರುತ್ತಾರೆ. ನಮ್ಮಿಂದ ಅಡಿಕೆಯನ್ನು ಖರೀದಿ ಮಾಡಿಕೊಂಡು ಒಟ್ಟು ರೂ 2,76,00,300 ಹಣವನ್ನು ನೀಡದೇ ವಂಚನೆ ಮಾಡಿದ್ದಾರೆ ಎಂದು ಕಮಲ್ ಕಾಂತ್ ಅವರು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ:16-2025 ಕಲಂ: 318(2), 318(4) ಬಿಎನ್ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here