ಶ್ರೀ ಮಹಾಲಕ್ಷ್ಮೀ ಮೆಟಲ್ಸ್‌ನವರ ನಾಲ್ಕನೇ ಮಳಿಗೆ ಶುಭಾರಂಭ

0

ಪುತ್ತೂರು: ಕಳೆದ 40 ವರ್ಷಗಳಿಂದ ದೈವ, ದೇವರ ವಿಗ್ರಹ, ಮುಖವಾಡಗಳ ತಯಾರಕ ಹಾಗೂ ಮಾರಾಟಗಾರ ಮಳಿಗೆ ಶ್ರೀ ಮಹಾಲಕ್ಷ್ಮೀ ಮೆಟಲ್ಸ್‌ನವರ ನಾಲ್ಕನೇ ಮಳಿಗೆ ಅ.2 ರಂದು ಬೆಳಗ್ಗೆ ಮುಖ್ಯರಸ್ತೆಯಲ್ಲಿರುವ ಜಿಎಲ್ ಕಾಂಪ್ಲೆಕ್ಸ್ ಮುಂಭಾಗದ ಕಟ್ಟದಲ್ಲಿ ಶುಭಾರಂಭಗೊಂಡಿತು.


ನೂತನ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಜೀವ ನಾಯಕ್ ಕಲ್ಲೇಗ ಮಾತನಾಡಿ, ಹಲವು ವರ್ಷಗಳಿಂದ ಮೆಟಲ್ಸ್ ವ್ಯವಹಾರವನ್ನು ಮುನ್ನಡೆಸುತ್ತಿರುವ ಮಹಾಲಕ್ಷ್ಮೀ ಮೆಟಲ್ಸ್‌ನವರ ನಾಲ್ಕನೇ ಮಳಿಗೆ ಪ್ರಾರಂಭಗೊಂಡಿದೆ. ಮ್ಹಾಲಕ ವಸಂತರವರು ಬಹಳ ಕಷ್ಟದಿಂದ ವ್ಯವಹಾರವನ್ನು ಮುನ್ನಡೆಸಿದವರು. ವ್ಯವಹಾರದ ಜೊತೆಗೆ ಹಲವು ದೇವಸ್ಥಾನ, ದೈವಸ್ಥಾನಗಳಿಗೂ ಸಹಕಾರ ನೀಡಿದವರು. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಮಹಾಲಕ್ಷ್ಮೀ ಮೆಟಲ್ಸ್ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಲಿ ಎಂದು ಶುಭಹಾರೈಸಿದರು.


ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ನ್ಯಾಯವಾದಿ ಮೋಹನ ಭಟ್ ಮಾತನಾಡಿ, ಮಹಾಲಕ್ಷ್ಮೀ ಮೆಟಲ್ಸ್‌ನವರ ವಿಸ್ತರಿತ ಮಳಿಗೆಯು ವಿಜಯದಶಮಿಯ ದಿನದಂದು ಶುಭಾರಂಭಗೊಂಡಿದ್ದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿದೆ. ಮಳಿಗೆಯಲ್ಲಿ ವಾರದ ಎಲ್ಲಾ ದಿನಗಳಲ್ಲಿಯೂ ಸೇವೆ ದೊರೆಯಲಿದೆ. ಗ್ರಾಹಕರ ಮನಸ್ಸಿಗೆ ನೋವಾಗದಂತೆ ಸೇವೆ ದೊರೆಯುತ್ತಿದೆ. ಬಹಳಷ್ಟು ಶ್ರಮದಿಂದ ವ್ಯವಹಾರದಲ್ಲಿ ಬೆಳವಣಿಗೆ ಹೊಂದಿರುವ ಮಳಿಗೆಯನ್ನು ತಂದೆಯ ಹಾದಿಯಲ್ಲಿ ಮಕ್ಕಳು ಮುನ್ನಡೆಸಬೇಕು ಎಂದು ಹೇಳಿದರು.


ಮೂಕಾಂಬಿಕಾ ಗ್ಯಾಸ್‌ನ ಮ್ಹಾಲಕ ಸಂಜೀವ ಆಳ್ವ ಮಾತನಾಡಿ, ನೂತನ ಮಳಿಗೆ ಪ್ರಾರಂಭಿಸುವಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸಿ ಸುಸಜ್ಜಿತ ಮಳಿಗೆ ಶುಭಾರಂಭಗೊಂಡಿದೆ. ಮಳಿಗೆಯಲ್ಲಿ ಗ್ರಾಹಕರಿರಗೆ ಅನುಕೂಲವಾಗುವಂತೆ ಕ್ರಮ ಬದ್ದವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದ್ದು ಮಳಿಗೆಯು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ಸತೀಶ್ ಜೈನ್ ಮಾತನಾಡಿ, ಸಂಸ್ಥೆಯ ಮ್ಹಾಲಕ ವಸಂತರವರ ಕಠಿಣ ಪರಿಶ್ರಮದ ಫಲವಾಗಿ ಇಂದು ಮೂರನೇ ಮಳಿಗೆ ಪ್ರಾರಂಭಗೊಂಡಿದ್ದು ಸಂಸ್ಥೆಯ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿ ಎಂದರು.


ಅರ್ಚಕ ಹರಿಪ್ರಸಾದ್ ವೈಲಾಯ ಕರಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಉದ್ಯಮಿ ರೋಶನ್ ರೈ ಬನ್ನೂರು, ಮ್ಹಾಲಕರ ಸಹೋದರ ಕಾನ ರಂಗಪ್ಪ ಪೂಜಾರಿ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಸ್ಥೆಯ ಮ್ಹಾಲಕ ವಸಂತ ಪೂಜಾರಿ, ಅವರ ಪತ್ನಿ ತುಳಸಿ, ಪುತ್ರ ಮನೋಜ್, ಪುತ್ರಿ ದೀಕ್ಷಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here