ಮಡಂತ್ಯಾರು 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಸಭೆ

0

ಮಡಂತ್ಯಾರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಡಂತ್ಯಾರು ಶ್ರೀ ಅನಂತಕೃಷ್ಣ ಭಟ್ ಕುಕ್ಕಿಲ ಇವರ ಪೌರೋಹಿತ್ಯದಲ್ಲಿ ಮಡಂತ್ಯಾರು ಗಣಪತಿ ಮಂಟಪದಲ್ಲಿ 4೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯು ಸೆ.3 ರಂದು ನಡೆಯಿತು.

ಅಧ್ಯಕ್ಷತೆಯನ್ನು ಹರೀಶ್ ಶೆಟ್ಟಿ ಪದೆಂಜಿಲ ವಹಿಸಿ, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ರವರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಮಡಂತ್ಯಾರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಶಶಿಪ್ರಭ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಮುಗೆರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥನದ ಪ್ರಧಾನ ಅರ್ಚಕ ಶ್ರೀಧರ ರಾವ್ ಪೇಜಾವರ, ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮೂಡಯುರು, ರತ್ನಾಕರ್ ಶೆಟ್ಟಿ ಮೂಡಯುರು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸಂಗೀತ ಶೆಟ್ಟಿ,  ಅಧ್ಯಕ್ಷ ಹರೀಶ್ ಶೆಟ್ಟಿ ಪದೆಂಜಿಲಗುತ್ತು, ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಕಾರ್ಯದರ್ಶಿ ಉಮೇಶ್ ಸುವರ್ಣ ಬಳ್ಳಮಂಜ, ಕೋಶಾಧಿಕಾರಿ ವೀರೇಂದ್ರ ಕುಮಾರ್ ಗಾಯತ್ರಿ ನಿವಾಸ, ಜೊತೆ ಕಾರ್ಯದರ್ಶಿ ನವೀನ್ ಕುಮಾರ್ ಕೋಡ್ಲಕ್ಕೆ, ತುಳಸಿ ದಾಸ್ ಪೈ, ಕಾಂತಪ್ಪ ಗೌಡ ಹತ್ತತೋಡಿ, ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .

ಸಾಧಕರಿಗೆ ಸನ್ಮಾನ : ಸೇನಾನಿ ಮಂಜುನಾಥ ಗೌಡ, ಎಸ್ ಎಸ್ ಎಲ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಚ್ಚಿನ ಮೊರಾರ್ಜಿ ಶಾಲೆಯ ರೋಷನ್ ನೆತ್ತರ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವೈಭವ್, ನಿರಂಜನ್ ಗೌಡ ಇವರ ಹೆತ್ತವರನ್ನು ಗೌರವಿಸಿದರು. ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿದ ಶ್ರೇಯಸ್ ಪೂಜಾರಿ, ದಾನಿಗಳನ್ನು ಗೌರವಿಸಲಾಯಿತು.
ಸಂಜೆ ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here