ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0


ಬೆಳ್ತಂಗಡಿ:ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆಪ್ಟೆಂಬರ್ .9 ರಂದು ಶ್ರೀ ಗುರು ನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 20 21- 22 ನೇ ಸಾಲಿನಲ್ಲಿ ಸಂಘವು ರೂ.130 ಕೋಟಿ ವ್ಯವಹಾರ ನಡೆಸಿ 40.29ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ 10% ಡಿವಿಡೆಂಟ್ ಘೋಷಣೆ ಮಾಡಿದರು.


ಸನ್ಮಾನ:

ಆರ್ಯಭಟ ಪ್ರಶಸ್ತಿ ವಿಜೇತ ಉದಯಕುಮಾರ್ ಲಾಯಿಲರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ
ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಬಂದಂತ ಎಲ್ಲಾ ಸದಸ್ಯರಿಗೆ ಉಡುಗರೆಯನ್ನು  ನೀಡಲಾಯಿತು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್.ಎಸ್. ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಗಣೇಶ್ ಭಂಡಾರಿ ನಿರ್ದೇಶಕರಾದ ಮುನಿರಾಜ ಅಜ್ರಿ,  ಪುರಂದರ , ನಾರಾಯಣ ಆಚಾರ್ಯ,  ಅಶೋಕ್ ರೈ , ತಿಮ್ಮಯ್ಯ ನಾಯ್ಕ,  ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ್,   ಪ್ರೇಮ,  ಡಿ.ಸಿಸಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.

ನಿರ್ದೇಶಕ ಶ್ರೀನಾಥ್ ಕೆ ಎಂ ಸ್ವಾಗತಿಸಿ,  ನಿರ್ದೇಶಕಿ  ರಾಧಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here