ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ರಾಧಾಕೃಷ್ಣರಿಗೆ ನೆರೆಹೊರೆ ಬಳಗದವರಿಂದ ಸನ್ಮಾನ

0

ಕೊಯ್ಯೂರು: 2022 – 23 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಯ್ಯುರು ಪ್ರೌಢಶಾಲೆ ಇಲ್ಲಿಯ ಪ್ರಭಾರ ಮುಖ್ಯ ಶಿಕ್ಷಕರಾದ  ರಾಧಾಕೃಷ್ಣ ಇವರಿಗೆ   ಪ್ರಫುಲ್ಲ ನಗರದ ಗೆಳೆಯರ ಬಳಗದವರು ಅವರ ನಿವಾಸದಲ್ಲಿ  ಸೆ.8ರಂದು ಸನ್ಮಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ  ಜಯಾನಂದ ಗೌಡ ವಹಿಸಿ , ರಾಧಾಕೃಷ್ಣರ ಮೇರು ವ್ಯಕ್ತಿತ್ವವನ್ನು ಕೊಂಡಾಡಿದರು.

ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ಭಟ್ ಅವರು ಮಾತನಾಡಿ ರಾಧಾಕೃಷ್ಣರವರ ಸಾಧನೆಗಳನ್ನು ತಮ್ಮ ಮತ್ತು ಅವರ ನಡುವಿನ 20 ವರ್ಷಗಳ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡು ಅವರ ಆದರ್ಶ ವ್ಯಕ್ತಿತ್ವವನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ  ಕುಮುದ,   ಮಾಲಿನಿ ಹೆಗಡೆ,  ಜಯಂತಿ ಲೋಕೇಶ್,  ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕರಾದ  ಮಂಜುನಾಥ್, ಉದಯವಾಣಿ ಪತ್ರಿಕೆಯ ವಿಶ್ರಾಂತ ವರದಿಗಾರ ಪಿ ಎಸ್  ಅಶೋಕ್   ರಾಧಾಕೃಷ್ಣರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಅಳದಂಗಡಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ  ಸನ್ನಿ ಕೆಎಂ ಮತ್ತು ಅವರ ಕುಟುಂಬದವರು,  ಹಿಂದುಳಿದ ವರ್ಗಗಳ ಹಾಸ್ಟೆಲ್ ನಿಲಯ ಮೇಲ್ವಿಚಾರಕರಾದ  ಲೋಕೇಶ್ ಮತ್ತು ಅವರ ಕುಟುಂಬದವರು,  ಬಿಎಸ್ಎನ್ಎಲ್ ಕಿಲಾಚಯ ನಿವೃತ್ತ ಉದ್ಯೋಗಿಯಾದ  ದಿನಕರ್ ಗೌಡ ಹಾಗೂ ಅವರ ಕುಟುಂಬದವರು , ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ  ಶಂಕರ್ ಭಟ್ಟ, ಪಶು ಚಿಕಿತ್ಸಾಲಯದ ಅಧಿಕಾರಿಗಳಾದ  ಶ್ರೀಧರ ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸನ್ಮಾನ ಸ್ವೀಕರಿಸಿದ ರಾಧಾಕೃಷ್ಣರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

 

LEAVE A REPLY

Please enter your comment!
Please enter your name here