ಅರಸಿನಮಕ್ಕಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ: ನಿವ್ವಳ ಲಾಭ ರೂ3, 14, 449: ಬೋನಸ್ 65%, ಡಿವಿಡೆಂಟ್ 10%

0

ಅರಸಿನಮಕ್ಕಿ: ಅರಸಿನಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶಿವಾನಂದ ಮಯ್ಯಾರವರ ಅಧ್ಯಕ್ಷತೆಯಲ್ಲಿ ಸೆ.21ರಂದು ಜರುಗಿತು.

ಕಾರ್ಯದರ್ಶಿ ಹರೀಶ್ ಪಿ ಅಭ್ಯಂಕರ್ ವರದಿ ವಾಚಿಸಿದರು. ಕೆ.ಎಂ ಎಫ್ ನ ಉಪ ವ್ಯವಸ್ಥಾಪಕರಾದ ಡಾ. ಚಂದ್ರಶೇಖರ್ ಭಟ್, ವಿಸ್ತರನಾಧಿಕಾರಿ ರಾಜೇಶ್ ಕಾಮತ್, ಪಶು ವೈದ್ಯಾಧಿಕಾರಿ ಡಾ.ಜಿತೇಂದ್ರ ಮಾಹಿತಿ ನೀಡಿದರು.

ಸಂಘವು ಪ್ರಸ್ತುತ ವರ್ಷದಲ್ಲಿ ರೂ.3,14,449 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 65% ಬೋನಸ್ ಹಾಗೂ 10% ಡಿವಿಡೆಂಟ್ ಘೋಷಿಸಲಾಯಿತು.

ಸಂಘದ ನಿರ್ದೇಶಕ ವರದ ಶಂಕರ ದಾಮ್ಲೆ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ಸಿಗೆ ನಿರ್ದೇಶಕರು , ಸದಸ್ಯರು, ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here