ಕೊಯ್ಯೂರು ಬಜಿಲ ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ಆಯುಧ ಹಾಗೂ ವಾಹನ ಪೂಜೆ

0


ಕೊಯ್ಯೂರು : ಇಲ್ಲಿಯ ಬಜಿಲ ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮ ಅ.4 ರಂದು ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡು ತಮ್ಮ ವಾಹನಗಳಿಗೆ ಪೂಜೆಯನ್ನು ನೇರವೇರಿಕೊಂಡರು. ಅರ್ಚಕರಾದ ಅನಂತರಾಮ ಶಬರಾಯ ಪೂಜಾ, ಧಾರ್ಮಿಕ,ವಿಧಿ-ವಿಧಾನಗಳೊಂದಿಗೆ ನೆರವೇರಿಸಿದರು. ಶ್ರೀ ಮಹಮ್ಮಾಯಿ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ ಬಜಿಲ ‌ಸಂಘ ನೇತೃತ್ವ ವಹಿಸಿದ್ದರು.ವಿವಿಧ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here