ಬಳಂಜ ಒಕ್ಕೂಟ ಸಭೆ

0


ಬಳಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ.ಬಳಂಜ, ಪ್ರಗತಿ ಬಂಧು ಒಕ್ಕೂಟ ಬಳಂಜ,  ಜನಜಾಗೃತಿ ವೇದಿಕೆ ಬಳಂಜ ಇದರ ನೇತೃತ್ವದಲ್ಲಿ ತ್ರೈ ಮಾಸಿಕ ಸಭೆಯು  ಅ. 30 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಪ್ರಮೋದ್. ಬಿ.ಯಸ್ ವಹಿಸಿದ್ದರು. ವಲಯ ಮೇಲ್ವಿಚಾರಕ ಅಚ್ಚುತ ರವರು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಪದ್ಮಾ ಸೋಲಾರ್ ಸಂಸ್ಥೆಯವರು ಆಗಮಿಸಿ ಸೋಲಾರ್ ಅಳವಡಿಕೆಯ ಪ್ರಯೋಜನದ ಬಗ್ಗೆ ಮಾಹಿತಿಯನ್ನು ನೀಡಿದರು.

ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ ರವರು ಸ್ವಾಗತಿಸಿ, ಒಕ್ಕೂಟ ವರದಿ ಮಂಡಿಸಿದರು. ಹರೀಶ್ ದೇವಾಡಿಗ ತಂಡದ ವರದಿಯನ್ನು ಓದಿದರು. ಸೇವಾಪ್ರತಿನಿಧಿ ಪ್ರಮೀಳಾ ರವರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಹರೀಶ್ ಹೆಗ್ಡೆ, ಅಬೂಬಕ್ಕರ್ ಬಳಂಜ, ರತ್ನವತಿ ಗಾಂಧಿನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here