ಕಲ್ಮ0ಜ ಉದಯ ಗೌಡ ಆಸಹಜ ಸಾವು ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ನಿಂದ ಧರ್ಮಸ್ಥಳ ಠಾಣೆಯ ಎದುರು ಪ್ರತಿಭಟನೆ

0

ಧರ್ಮಸ್ಥಳ : ಕಲ್ಮಂಜ ಗ್ರಾಮದ ಕರಿಯನೆಲ ನಿವಾಸಿ ಉದಯ ಗೌಡ ಆಕಸ್ಮಿಕ ಮರಣವನ್ನಪ್ಪಿದ್ದು ಅಸಹಜ ಸಾವಿನ ವಿಚಾರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ನ.2 ರಂದು ಕಾಂಗ್ರೆಸ್ ಪಕ್ಷದಿಂದ ಧರ್ಮಸ್ಥಳ ಪೋಲಿಸ್ ಠಾಣೆಯ ಮುಂಭಾಗ ವತಿಯಿಂದ ಪ್ರತಿಭಟನೆ ನಡಿಸಿದರು.

ಮಾಜಿ ಶಾಸಕ ಕೆ.ವಸಂತ ಬಂಗೇರ,ಮಾಜಿ ಸಚಿವ ಗಂಗಾಧರ ಗೌಡ,ಬೆಳ್ತಂಗಡಿ ವಿಧಾನ ಸಭಾಕ್ಷೇತ್ರದ ಉಸ್ತುವಾರಿ ಟಿ. ಎನ್, ಎಂ. ಶಾಹಿದ್, ಉಬಯ ಬ್ಲಾಕ್ ಅಧ್ಯಕ್ಷರು ಗಳಾದ ಕೆ. ಶೈಲೇಶ್ ಕುಮಾರ್, ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ರಂಜನ್ ಜಿ. ಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಮಿತ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಪಕ್ಷದ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here