ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಕಾರ್ಯಕ್ರಮ

0

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ( ರಾಜ್ಯ ಪಠ್ಯಕ್ರಮ) ಉಜಿರೆ ಇಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ,ಕಲಾಸಕ್ತಿ ಮೂಡಿಸುವ ಉದ್ದೇಶದಿಂದ ಹನಿಗವನ, ಚುಟುಕು, ಕತೆ, ಕವನ ,ಹಾಸ್ಯ ಚಟಾಕಿ ಗಳ ರಚನೆ ಹುಟ್ಟು ಬೆಳವಣಿಗೆಯ ಕುರಿತಾಗಿ ಉಪನ್ಯಾಸಕರಾದ ಡಾ.ದಿವಾ ಕೊಕ್ಕಡ ಇವರು ವಿದ್ಯಾರ್ಥಿಗಳಿಗೆ ವಿಷಯವನ್ನು ಉದಾಹರಣೆ ಸಹಿತ ತಿಳಿಯಪಡಿಸಲಾಯಿತು.

ವಿದ್ಯಾರ್ಥಿಗಳು ತಾವು ರಚಿಸಿದ ಕವನಗಳನ್ನು ವಾಚಿಸಿದರು. ಸಾಹಿತ್ಯ ಸಂಘ ನೆರವೇರಿಸಿದ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ಶಿಕ್ಷಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಿನಾದ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಸಾದ್ವಿತ್ ಜೈನ್ ಸ್ವಾಗತಿಸಿ, ಶ್ರೇಯ ವಂದಿಸಿದರು.

LEAVE A REPLY

Please enter your comment!
Please enter your name here