ಕರಾಟೆ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ಪಡೆದ ಹೋಲಿ ರಿಡೀಮರ್ ಶಾಲೆ

0

ಬೆಳ್ತಂಗಡಿ:  ಯಮೋಟೋ ಶೊಟೋಕಾನ್ ಕರಾಟೆ ಸಂಸ್ಥೆ ಮಂಗಳೂರು ಇವರು ಆಯೋಜಿಸಿದ ರಾಜ್ಯಮಟ್ಟದ ಆಮಂತ್ರಿತ ಕರಾಟೆ ಚಾಂಪಿಯನ್ ಶಿಪ್ 2022-23 ನವೆಂಬರ್ 12ರಂದು ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿರುತ್ತಾರೆ. ವಿದ್ಯಾರ್ಥಿಗಳಾದ ಮಾನ್ವಿ (6ನೇ) ಕುಮಿತೆ ಪ್ರಥಮ ಸ್ಥಾನ ಹಾಗೂ ಕಟಾ ಪ್ರಥಮ ಸ್ಥಾನ, ಪ್ರಗತಿ (4ನೇ) ಕುಮಿತೆ ಪ್ರಥಮ ಸ್ಥಾನ ಹಾಗೂ ಕಟಾ ತೃತೀಯ ಸ್ಥಾನ, ಶಮಂತ್ (6ನೇ) ಕುಮಿತೆ ಪ್ರಥಮ ಸ್ಥಾನ ಹಾಗೂ ಕಟಾ ದ್ವಿತೀಯ ಸ್ಥಾನ, ಮನ್ವಿಕ್ ಕೆ ಯು (4ನೇ) ಕುಮಿತೆ ಪ್ರಥಮ ಸ್ಥಾನ ಹಾಗೂ ಕಟಾ ದ್ವಿತೀಯ ಸ್ಥಾನ, ಖುಷಿ (7ನೇ) ಕುಮಿತೆ ದ್ವಿತೀಯ ಸ್ಥಾನ ಹಾಗೂ ಕಟಾ ದ್ವಿತೀಯ ಸ್ಥಾನ, ಆನ್ ಮರಿಯ(6ನೇ) ಕುಮಿತೆ ತೃತೀಯ ಸ್ಥಾನ ಹಾಗೂ ಕಟಾ ಪ್ರಥಮ ಸ್ಥಾನ, ಅಂಜುಮರಿಯ (5ನೇ) ಕುಮಿತೆ ಪ್ರಥಮ ಸ್ಥಾನ ಹಾಗೂ ಕಟಾ ದ್ವಿತೀಯ ಸ್ಥಾನ, ಅಯಾನ್ (5ನೇ) ಕುಮಿತೆ ತೃತೀಯ ಸ್ಥಾನ ಹಾಗೂ ಕಟಾ ಪ್ರಥಮ ಸ್ಥಾನ, ಸೋನಲ್ (5ನೇ) ಕಟಾ ತೃತೀಯ ಸ್ಥಾನ, ಭುವಿ (6ನೇ) ಕಟಾ ತೃತೀಯ ಸ್ಥಾನ, ವಿಹಾನ್ (3ನೇ) ಕಟಾ ತೃತೀಯ ಸ್ಥಾನ, ಪ್ರಜ್ವಲ್(4 ನೇ) ಕಟಾ ತೃತೀಯ ಸ್ಥಾನ, ಸ್ಪ್ರೀಸ್ ವೇಗ‌ಸ್ (4ನೇ) ಕಟಾ ತೃತೀಯ ಸ್ಥಾನ ಹಾಗೂ ಸುಮಿತ್(8ನೇ) ಕುಮಿತೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕರಾಟೆ ಶಿಕ್ಷಕರಾದ ಶ್ರೀ ಅಶೋಕ್ ಆಚಾರ್ಯ ತರಬೇತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here