ಲಯನ್ಸ್ ಪ್ರಾಂತ್ಯ ಸಮ್ಮೇಳನದ ಸಮಾಲೋಚನೆ ಸಭೆ

0

ಬೆಳ್ತಂಗಡಿ: ಲಯನ್ಸ್ ಪ್ರಾಂತ್ಯಾಧ್ಯಕ್ಷ, ಶ್ರದ್ಧಾ ಎಂಟರ್ ಪ್ರೈಸಸ್ ಮಾಲಕ ವಸಂತ ಶೆಟ್ಟಿ ಅವರ ಪ್ರಾಂತ್ಯ 5 ರ ಪ್ರಾಂತ್ಯ ಸಮ್ಮೇಳನವು ನ. 27 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಸಮ್ಮೇಳನ ಸಮಿತಿ ಸಮಾಲೋಚನಾ ಸಭೆ ನ.14 ರಂದು ಜರುಗಿತು.

ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯಾಧ್ಯಕ್ಷ ಹೇಮಂತ ರಾವ್ ಎರ್ಡೂರು, ಕೋಶಾಧಿಕಾರಿ ಸುರೇಂದ್ರ, ಬಪ್ಪನಾಡು‌ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಸಮಿತಿ ಗೌರವ ಸಲಹೆಗಾರ ಧರಣೇಂದ್ರ ಕೆ ಜೈನ್ ವೇದಿಕೆಯಲ್ಲಿದ್ದರು.

ಉಳಿದಂತೆ ಲಯನ್ಸ್ ವಲಯ 1 ರ ಅಧ್ಯಕ್ಷ ಮೆಲ್ವಿನ್ ಡಿಕೋಸ್ಟಾ, ಮೂಡಬಿದ್ರೆ ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಶೆಟ್ಟಿ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಬಪ್ಪನಾಡು ಲಯನ್ಸ್ ಕ್ಲಬ್ ಕೋಶಾಧಿಕಾರಿ ಶಿವಪ್ರಸಾದ್, ಪ್ರತಿಭಾ ವೆಂಕಟೇಶ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜನಾ ಪಟ್ಟಿಯನ್ನು‌ ಸಭೆಯಲ್ಲಿ ಅಂಗೀಕರಿಸಲಾಯಿತು. ಉಪಸಮಿತಿಗಳ ಸಂಚಾಲಕರುಗಳು ಆಯಾಯಾ ಸಮಿತಿಯ ಪ್ರಗತಿ ವರದಿ ನೀಡಿದರು. ಅಶ್ರಫ್ ಆಲಿಕುಂಞಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.‌

ಆತಿಥೇಯ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ ದೇವಿಪ್ರಸಾದ್ ಬೊಳ್ಮ ಸ್ವಾಗತಿಸಿದರು‌. ಸಮ್ಮೇಳನ‌ ಸಮಿತಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

LEAVE A REPLY

Please enter your comment!
Please enter your name here