ಕುಕ್ಕಳಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

0

ಕುಕ್ಕಳಬೆಟ್ಟು : ಕುಕ್ಕಳಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ನ. 18 ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶಶಿಪ್ರಭಾ ಇವರು ವಹಿಸಿಕೊಂಡಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ಮಡಂತ್ಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಸಂಗೀತಶೆಟ್ಟಿ,  ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಸುವರ್ಣ ಅಲೆಕ್ಕಿ ಮತ್ತು ಹರೀಶ್ ಶೆಟ್ಟಿ ಪದೆಂಜಿಲ ಸ್ಥಳೀಯ ಹಿರಿಯರಾದ ರಾಮಣ್ಣ ಮೂಲ್ಯ ಕುಕ್ಕಳ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ   ಉಷಾ ಹಾಗೂ ಆಶಾಕಾರ್ಯಕರ್ತೆ  ಸುನಂದಾ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಟೀಚರ್  ಪುಷ್ಪವತಿ ಎಲ್ಲರನ್ನು ಸ್ವಾಗತಿಸಿದರು, ಸುಮಿತ್ರಾ ಪ್ರಸ್ತಾವಿಕ ಭಾಷಣದೊಂದಿಗೆ ವರದಿ ವಾಚಿಸದರು.ಜೆ ಸಿ ಐ ಸದಸ್ಯರು ಹಾಗೂ ಸ್ಥಳಿಯ ಹಲೆಕ್ಕಿ ಫ್ರೆಂಡ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸಿದರು.ಪುಷ್ಪವತಿ ಕಾರ್ಯಕ್ರಮ ನಿರೂಪಿಸಿದರು. ಬಹುಮಾನ ವಿತರಣೆ ನಂತರ ದೀಕ್ಷಿತಾ ಇವರು ಧನ್ಯವಾದವಿತ್ತರು.

ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋಧಾವಳಿ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here