ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾ ಅಧಿಕಾರ ಸ್ವೀಕಾರ

0

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾರವರು ಸೆ.12ರಂದು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ತಾಲ್ಲೂಕು ವಿಸ್ತರಣಾಧಿಕಾರಿ ಶುಭಾ ಎ. ಹಾಗೂ ತಾಲೂಕು ನಿಲಯಗಳ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು ಗೀತಾರವರನ್ನು ಹೂವು ನೀಡಿ ಸ್ವಾಗತಿಸಿದರು.

11 ವರ್ಷಗಳಿಂದ ಪುತ್ತೂರಿನಲ್ಲಿ ನಿಲಯ ಪಾಲಕರಾಗಿದ್ದ ಗೀತಾರವರು, ಅದಕ್ಕಿಂತ ಮೊದಲು ಬೆಳ್ತಂಗಡಿಯಲ್ಲಿ 9ವರ್ಷ ನಿಲಯಪಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಭಡ್ತಿ ಗೊಂಡಿರುವ ಗೀತಾರವರು ಸುಳ್ಯ ತಾಲ್ಲೂಕಿಗೆ ವರ್ಗಾವಣೆಗೊಂಡು, ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಬಜ್ಜೆಯವರಾದ ಇವರ ಪತಿ ನಿವೃತ್ತ ಸೈನಿಕರಾಗಿದ್ದು, ಬೆಂಗಳೂರಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಮತ್ತು ಪುತ್ರ ಪುತ್ತೂರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here