ಪಡ್ನೂರು ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ಬೇಕು – ಬನ್ನೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಪುತ್ತೂರು: ಬನ್ನೂರು ಗ್ರಾ.ಪಂನಿಂದ ಪಡ್ನೂರು ಗ್ರಾಮವನ್ನು ಬೇರ್ಪಡಿಸಿ, ಪಡ್ನೂರಿಗೆ ಪ್ರತ್ಯೇಕ ಪಂಚಾಯತ್ ಘೋಷಣೆ ಮಾಡುವಂತೆ ಬನ್ನೂರು ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದ್ದು ಈ ಕುರಿತು ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯಕೈಗೊಳ್ಳಲಾಗಿದೆ.

ಸಭೆಯು ಜ.25ರಂದು ಅಧ್ಯಕ್ಷೆ ಜಯ ಎ.ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು. ಗ್ರಾಮಸ್ಥ ಸುದರ್ಶನ್ ಮಾತನಾಡಿ, ಪಡ್ನೂರು ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ಘೋಷಿಸುವಂತೆ ವಾರ್ಡ್ ಸಭೆಯಲ್ಲಿ ಬೇಡಿಕೆ ಬಂದಿದ್ದು, ಗ್ರಾಮ ಸಭೆಯಲ್ಲಿ ಪ್ರತ್ಯೇಕ ಪಂಚಾಯತ್ ಮಾಡುವಂತೆ ನಿರ್ಣಯಕೈಗೊಳ್ಳಬೇಕು. ಹಾಗೂ ಗ್ರಾಮ ಪಂಚಾಯತ್ ಕಛೇರಿಗೆ ಜಮೀನು ಕಾದಿರಿಸುವಂತೆ ತಿಳಿಸಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ನಿವೇಶನ ರಹಿತರಿಗೆ ನಿವೇಶನದ ಹಕ್ಕು ಪತ್ರ ಕಳೆದ ಅವಧಿಯಲ್ಲಿ ವಿತರಿಸಲಾಗಿದೆ. ಇದೇ ಸ್ಥಳಲ್ಲಿ ಮೆಸ್ಕಾಂನವರು ವಿದ್ಯುತ್ ಪರಿವರ್ತಿಕವನ್ನು ಅಳವಡಿಸಿದ್ದಾರೆ. ಬಡವರಿಗೆ ನೀಡಿದ ನಿವೇಶನದಲ್ಲಿಯೇ ಪರಿರ್ತಕ ಅಳವಡಿಸಿದರೆ ಅವರು ಅಲ್ಲಿ ಮನೆ ಕಟ್ಟಲು ಸಾಧ್ಯವೇ? ಅವರ ಇನ್ನೆಲ್ಲಿಗೆ ಹೋಗಬೇಕು ಎಂದು ಮಾಜಿ ಸದಸ್ಯ ಅಣ್ಣಿ ಪೂಜಾರಿಯವರು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ವೀರನಾಯ್ಕ, ಒಂದು ಬಾರಿ ಅಳವಡಿಸಿದ ವಿದ್ಯುತ್ ಕಂಬ ಅಥವಾ ಪರಿವರ್ತಕವನ್ನು ಸ್ಥಳಾಂತರಿಸಲಅವಕಾಶವೇ ಇಲ್ಲ. ಹಾಗಅಳವಡಿಸುವ ಮೊದಲೇ ಆಕ್ಷೇಪಣೆಯಿದ್ದರೆ ಬದಲಾಯಿಸಲು ಅವಕಾಶವಿದೆ ಎಂದರು. ಪರಿವರ್ತಕ ಅಳವಡಿಸುವ ಸಂದರ್ಭದಲ್ಲಿ ಪಂಚಾಯತ್‌ನಲ್ಲಿ ಕೇಳದೇ ಅಳವಡಿಸಲಾಗಿದೆ. ಈಗ ಸಾಧ್ಯವಿಲ್ಲ ಅಂದರೆ ಹೇಗೆ. ನಿವೇಶನ ಹಕ್ಕುಪತ್ರ ಪಡೆದುಕೊಂಡರವರಿಗೆ ಮನೆ ಮಂಜೂರು ಆಗಿದೆ. ತೆರವುಗೊಳಿಸದಿದ್ದರೆ ಅವರೇನು ಮಾಡಬೇಕು ಎಂದು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆಗಳು ನಡೆದು ಪಂಚಾಯತ್‌ನಿಂದ ಪರಿಶೀಲನೆ ನಡೆಸುವುದಾಗಿ ತೀರ್ಮಾಣಿಸಲಾಯಿತು.

ಉಪಾಧ್ಯಕ್ಷೆ ಗೀತಾ, ಸದಸ್ಯರಾದ ರಮಣಿ ಡಿ.ಗಾಣಿಗ, ಗಣೇಶ್ ಪಳ್ಳ, ಗಿರಿಧರ ಪಂಜಿಗುಡ್ಡೆ, ವಿಮಳ, ಶ್ರೀ ನಿವಾಸ ಪೆರ್ವೋಡಿ, ಸ್ಮಿತಾ, ರಾಘವೇಂದ್ರ ಗೌಡ, ಶೀನಪ್ಪ ಕುಲಾಲ್, ತಿಮ್ಮಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿ, ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here