ಕುಕ್ಕುಜಡ್ಕದಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಮತ್ತು ಶಿಶು ಪ್ರದರ್ಶನ

0

 

ಅಮರಮುಡ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸ್ತ್ರೀ ಶಕ್ತಿ ಗೊಂಚಲು ಇದರ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಪ್ರಯುಕ್ತ ಪೌಷ್ಠಿಕ ಆಹಾರ ಸಪ್ತಾಹ “ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ” ಕಾರ್ಯಕ್ರಮದಡಿಯಲ್ಲಿ ಶಿಶು ಪ್ರದರ್ಶನ ಕಾರ್ಯಕ್ರಮ ಪಂಚಾಯತ್ ಕೊರಗ ಸಭಾ ಭವನದಲ್ಲಿ ಸೆ.16 ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ಕಾರ್ಯಕ್ರಮ ಉದ್ಘಾಟಿಸಿದರು.
ಗೊಂಚಲಿನ ಉಪಾಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮಹಿಳಾ ಮಂಡಲ ಒಕ್ಕೂಟದ ಉಪಾಧ್ಯಕ್ಷೆ ಮಧುಮತಿ ಬೊಳ್ಳೂರು, ಪಂ.ಸದಸ್ಯರಾದ ಕೃಷ್ಣ ಪ್ರಸಾದ್ ಮಾಡಬಾಕಿಲು, ಸೀತಾ ಹೆಚ್, ದಿವ್ಯ ಮಡಪ್ಪಾಡಿ , ಪಿ.ಡಿ.ಒ ಆಕಾಶ್ ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಅಧಿಕಾರಿ ಲಲಿತಾ ಹೆಚ್.ಕೆ ಪೌಷ್ಟಿಕ ಆಹಾರ ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕಿ ಉಷಾ ಪ್ರಾಸ್ತಾವಿಕ ಮಾತನಾಡಿದರು.


ಸಂಘದ ಸದಸ್ಯರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮೋಹಿನಿ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು. ವಸಂತಿ ಕಾರ್ಯಕ್ರಮ ನಿರೂಪಿಸಿದರು.ಸಮುದಾಯ ಆರೋಗ್ಯ ಇಲಾಖಾಧಿಕಾರಿ ಶಿಲ್ಪ ಮತ್ತು ಮೋಕ್ಷಿತಾ ಹಾಗೂ ಆಶಾ ಕಾರ್ಯಕರ್ತೆ ಯರು ಸಹಕರಿಸಿದರು. ಸಂಘದ ಸದಸ್ಯರು, ಪೋಷಕರು,ಮಕ್ಕಳು, ದೊಡ್ಡತೋಟ ವಲಯದ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here