ಸುಬ್ರಹ್ಮಣ್ಯ: ಮಹಿಳಾ ಸೊಸೈಟಿ ಮಹಾಸಭೆ

0

ಸುಬ್ರಹ್ಮಣ್ಯದಲ್ಲಿ ಕೇಂದ್ರ ಕಛೇರಿ ಹೊಂದಿರುವ ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ‌. 22ರಂದು ಸುಬ್ರಹ್ಮಣ್ಯ ಗ್ರಾ.ಪಂ.ನ ರಾಜೀವ್ ಗಾಂಧಿ ಸೇವಾ ಕೇಂದ್ರದ ಕುಮಾರಧಾರಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಕೌಶಿಕ್ ರಾವ್ ಸುಬ್ರಹ್ಮಣ್ಯ ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಾರಿಜಾಕ್ಷಿ ಪಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.

ಸಂಘದ ಉಪಾಧ್ಯಕ್ಷೆ ಶ್ರೀಮತಿ ಲೀಲಾಮನಮೋಹನ್, ನಿರ್ದೇಶಕರಾದ ಶ್ರೀಮತಿ ಶಶಿಕಲಾ ಎಸ್. ಶೆಟ್ಟಿ, ಶ್ರೀಮತಿ ವಿಮಲಾ ರಂಗಯ್ಯ, ಶ್ರೀಮತಿ ಚಂದ್ರಾಕ್ಷಿ ಜೆ ರೈ, ಶ್ರೀಮತಿ ನಾಗವೇಣಿ ಎಸ್. ಶ್ರೀಮತಿ ಲೀಲಾವತಿ ಯು, ಶ್ರೀಮತಿ ಫಮಿದಾ ಸಂಶುದ್ದೀನ್, ಶ್ರೀಮತಿ ಅನಸೂಯಾ ಬಿ.ಎ, ಶ್ರೀಮತಿ ಸುವರ್ಣಿನಿ ಎನ್. ಎಸ್, ಶ್ರೀಮತಿ ಶೋಭ ನಲ್ಲೂರಾಯ, ಶ್ರೀಮತಿ ಭವಿತಾ ವೈ ಶೆಟ್ಟಿ, ಶ್ರೀಮತಿ ಸುಜಾತ ಗಣೇಶ್, ಶ್ರೀಮತಿ ಪದ್ಮಾವತಿ, ಶ್ರೀಮತಿ ಪ್ರಪುಲ್ಲಾ ಪಿ.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ವರ್ಗ ಸಹಕಾರ ನೀಡಿದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here