ಕೆ.ವಿ.ಜಿ. ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮಹಾಸಭೆ

0

14 ಕೋಟಿ ವ್ಯವಹಾರ ಶೇ. 10 ಡಿವಿಡೆಂಟ್ ಘೊಷಣೆ

ಕೆ.ವಿ.ಜಿ. ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯು ಸೆ.೨೪ರಂದು ಸಂಘದ ಅಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿಯವರ ಅಧ್ಯಕ್ಷತೆಯಲ್ಲಿ ಕೆ.ವಿ.ಜಿ.ಐ.ಪಿ.ಎಸ್‌ನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾದ ಡಾ|ರೇಣುಕಾ ಪ್ರಸಾದ್ ಕೆ.ವಿ ಯವರು ವರದಿ ವಾಚಿಸಿ ಸದ್ರಿ ವರ್ಷದಲ್ಲಿ ಸುಮಾರು ೧೪ ಕೋಟಿ ವ್ಯವಹಾರ ನಡೆಸಿ ಸಂಘದ ಅಭಿವೃದ್ದಿಯಲ್ಲಿ ಸಹಕರಿಸಿದ ಸಹಕಾರಿಯ ಎಲ್ಲಾ ಸದಸ್ಯರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು ಮತ್ತು ಸಂಘದ ಸದಸ್ಯರಿಗೆ ಶೇಕಡಾ ೧೦ ಡಿವಿಡೆಂಟ್ ಘೋಷಣೆ ಮಾಡಿದರು.
ಸಹಕಾರಿಯ ಗೌರವ ಸಲಹೆಗಾರರಾದ ಕೆ.ಆರ್ ಮನಮೋಹನ್, ಸೂರಯ್ಯ ಸೂಂತೋಡು, ಪಿ.ಎಸ್.ಗಂಗಾಧರ, ಸಂತೋಷ್ ಜಾಕೆ, ಜಯಪ್ರಕಾಶ್ ಕುಂಚಡ್ಕ, ದಯಾನಂದ ಕುರುಂಜಿ, ಬಾಲಗೋಪಾಲ ಸೇರ್ಕಜೆ ರವರನ್ನು ಅಧ್ಯಕ್ಷರಾದ ಡಾ|ರೇಣುಕಾ ಪ್ರಸಾದ್ ಕೆ.ವಿ ಯವರು ಸನ್ಮಾನಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಚಿದಾನಂದ ಗೌಡ ಬಾಳಿಲ, ನಿರ್ದೇಶಕರುಗಳಾದ ಡಾ|ಜ್ಯೋತಿ ಆರ್ ಪ್ರಸಾದ್, ಡಾ|ಉಜ್ವಲ್ ಊರುಬೈಲು, ಡಾ|ಮನೋಜ್ ಕುಮಾರ್ ಅಡ್ಡಂತಡ್ಕ, ಬಿ.ಟಿ.ಮಾಧವ, ಭವಾನಿಶಂಕರ ಅಡ್ತಲೆ, ಪದ್ಮನಾಭ ಕೆ, ನಾಗೇಶ್ ಕೊಚ್ಚಿ, ಪ್ರಸನ್ನ ಕಲ್ಲಾಜೆ, ದಯಾನಂದ ಅಟ್ಲೂರು , ಸುಬ್ರಹ್ಮಣ್ಯ ನೆಲ್ಲಿ ಬಂಗಾರಡ್ಕ, ಹಿರಿಯ ಪ್ರಬಂಧಕ ಅಂಕುಶ್ ಕೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಡಾ|ಮನೋಜ್ ಕುಮಾರ್ ಸ್ವಾಗತಿಸಿ ಡಾ|ಉಜ್ವಲ್ ಊರುಬೈಲು ರವರು ವಂದಿಸಿದರು, ಭವಾನಿಶಂಕರ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here