ಕಲ್ಲುಗುಂಡಿ : ಆಟೋ ರಿಕ್ಷಾ ಚಾಲಕರ ಸಂಘದ ವಾರ್ಷಿಕ ಮಹಾಸಭೆ

0

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ರಿ. ಬಿ.ಯಂ.ಯಸ್ ಸಂಯೋಜಿತ ಕಲ್ಲುಗುಂಡಿ ಘಟಕ ಇದರ ವಾರ್ಷಿಕ ಮಹಾಸಭೆಯು   ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಬಿ.ಯಂ.ಯಸ್ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಹಾಗೂ ಕಾರ್ಯದರ್ಶಿಯಾದ ಚಂದ್ರಶೇಖರ ಮರ್ಕಂಜ ಹಾಗೂ ಕಲ್ಲುಗುಂಡಿ ಬಿ.ಯಂ.ಯಸ್ ಘಟಕದ ಅಧ್ಯಕ್ಷರಾದ ವಸಂತ ಊರುಬೈಲ್ ಇವರ ನೇತೃತ್ವದಲ್ಲಿ ಕಲ್ಲುಗುಂಡಿ ಘಟಕದ ಸಭೆ ನಡೆಯಿತು. 


  ಕೋಶಾಧಿಕಾರಿಯಾದ ಪ್ರಮೋದ್ ಅವರು ಖರ್ಚುವೆಚ್ಚಗಳ ಲೆಕ್ಕಾಚಾರವನ್ನು ಮಂಡಿಸಿದ್ದರು. ಕಾರ್ಯದರ್ಶಿ ಯಶೋದರ  ಕಾರ್ಯಕ್ರಮವನ್ನು ನಿರೂಪಿಸಿದರು. ಸುಳ್ಯ ಬಿ.ಯಂ.ಯಸ್ ತಾಲೂಕು ಅಧ್ಯಕ್ಷರ ಉಪಸ್ಥಿತಿ ಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು..
ಅಧ್ಯಕ್ಷ  ಕೇಶವ ಬಂಗ್ಲೆಗುಡ್ಡೆ, ಉಪಾಧ್ಯಕ್ಷ  ಜಗದೀಶ್ ದೊಡ್ಡಡ್ಕ, ಪ್ರಧಾನ ಕಾರ್ಯದರ್ಶಿ  ರವಿ ನಿಡಿಂಜಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾಪಿಲ, ಸಂಘಟನಾ ಕಾರ್ಯದರ್ಶಿ  ರತ್ನಾಕರ ಕೈಪಡ್ಕ ಹಾಗೂ ಪ್ರಭಾಕರ ಕಾಡುಪಂಜ ನಿರ್ದೇಶಕರು ರಮೇಶ್ ಎಸ್ ನೆಲ್ಲಿಕುಮೇರಿ ಹಾಗೂ ನವೀನ್ ಆಚಾರ್ಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಕೃತಿ ವಿಕೋಪದಿಂದ ಮನೆಕಳೆದುಕೊಂಡ ಸದಸ್ಯರಾದ ಸುಧಾಕರ ಬಾಚಿಗದ್ದೆ ಹಾಗೂ ಚಿದಾನಂದ ಮೂಡನಕಜೆ ಇವರಿಗೆ ಧನಸಹಾಯವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here