ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕರ ತಂಡ ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಿಭಾಗ ಮಟ್ಟಕ್ಕೆ

0

ಸಾರ್ವಜನಿಕ ಸಾಕ್ಷರತ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ನಾಲ್ಯ ಶಕ್ತಿ ನಗರ ಮಂಗಳೂರು ಇದರ ಸಂಯುಕ್ತ ಆಶ್ರಯ ದಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕರ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸುಳ್ಯ ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್‌ ಹಝಿಂ,ನೇಸರ್,ಅಹಮ್ಮದ್ ಅನ್ ಪಾಲ್,ಸಚಿತ್ ಗೌಡ,ಮನೋಹರ, ಅಹಮ್ಮದ್ ಪಾಯಿಜ್ ಸುಳ್ಯ ತಾಲೂಕನ್ನು ಪ್ರತಿನಿಧಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾ ಸಂಸ್ಥೆ ಯ ಸಂಚಾಲಕರಾದ ರೇ ಪಾದರ್ ವಿಕ್ಟರ್ ಡಿ’ ಸೋಜ ಹಾಗೂ ಮುಖೋಪಾದ್ಯಾಯಿನಿ ಸಿಸ್ಟರ್ ಅಂತೋನಿ ಮೇರಿ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಉಮೇಶ್ ಪಂಜದಬ್ಯೆಲು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here