ಸುಳ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ

0

 

 

 

ಸಹಕಾರ ರತ್ನ ಪುರಸ್ಕೃತ ಸೀತಾರಾಮ ರೈ ಮತ್ತು ಯುವ ಸಾಧಕ ಜಿತೇಂದ್ರ ರಿಗೆ ಸನ್ಮಾನ

ಹೆಜ್ಜೆ ಗುರುತು ಸ್ಮರಣ ಸಂಚಿಕೆ, ಎಸ್.6 ಲಾಂಛನ ಮತ್ತು 9 ದಿನದ ಕಾರ್ಯಕ್ರಮದ ವರದಿ ಪುಸ್ತಕ ಬಿಡುಗಡೆ


ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ , ದಸರಾ ಉತ್ಸವ ಸಮಿತಿ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಕಳೆದ 9 ದಿನಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.9 ರಂದು ಸಚಿವ ಎಸ್ .ಅಂಗಾರ ರವರ ಅಧ್ಯಕ್ಷತೆಯಲ್ಲಿ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ದ ಸಂಚಾಲಕರಾದ ಸೀತಾರಾಮ ರೈ ಸವಣೂರು ಮತ್ತು ಯುವ ಸಾಧಕ ಎಸ್.ಆರ್. ಇಂಟಿರಿಯರ್ ಮತ್ತು ಆರ್ಕಿಟೆಕ್ಟ್ ಬೆಂಗಳೂರು ಇದರ ಮಾಲಕ ಜತೇಂದ್ರ ರವರನ್ನು ಸಚಿವರ ನೇತೃತ್ವದಲ್ಲಿ ಜಂಟಿ ಸಮಿತಿಗಳ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಸ್.6 ಗೌರವಾಧ್ಯಕ್ಷ ಗೋಕುಲ್ ದಾಸ್, ಎಸ್.6 ಅಧ್ಯಕ್ಷ ಚಿದಾನಂದ ವಿದ್ಯಾನಗರ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಗೌರವ ಸಲಹೆಗಾರರಾದ ಡಾ.ಲೀಲಾಧರ ಡಿ.ವಿ,ಹರೀಶ್ ರೈ ಉಬರಡ್ಕ, ದಸರಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಬೆಂಗಳೂರು, ಎಸ್.6 ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು,ಕೋಶಾಧಿಕಾರಿ ಪ್ರದೀಪ್ ಕೆ.ಎನ್, ಟ್ರಸ್ಟ್ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಸರಾ ಉತ್ಸವದ ಪ್ರಯುಕ್ತ ಹೆಜ್ಜೆ ಗುರುತು ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು. ಎಸ್.6 ಕುರಿತು ಸುಂದರವಾಗಿ ಮೂಡಿ ಬಂದ ಲಾಂಛನದ ಬಿಡುಗಡೆಯಾಯಿತು. ದಸರಾ ಉತ್ಸವದ 9 ದಿನಗಳ ಕಾಲ ನಡೆದ ಕಾರ್ಯಕ್ರಮದ ಸಂಪೂರ್ಣ ವರದಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಬ್ರಹಶ್ರೀ ವೇದಮೂರ್ತಿ ಪುರೋಹಿತ್ ನಾಗರಾಜ್ ಭಟ್ ಪ್ರಾರ್ಥಿಸಿದರು. ಉತ್ಸವ ಸಮಿತಿ ಪ್ರ.ಕಾರ್ಯದರ್ಶಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಗೌರವಾಧ್ಯಕ್ಷ ಗೋಕುಲ್ ದಾಸ್ ವರದಿ ವಿವರ ಮಂಡಿಸಿದರು. ಅಧ್ಯಕ್ಷ ಚಿದಾನಂದ ವಿದ್ಯಾನಗರ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಸೆವೆನ್ ನೋಟ್ಸ್ ದಿ ಮ್ಯೂಸಿಕ್ ಬ್ಯಾಂಡ್ ಬೈಲೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಜಂಟಿ ಸಮಿತಿ ಯ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಯಂ ಸೇವಕ ರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here