ಹಳೆಗೇಟು : ಅಂಗಡಿಯಲ್ಲಿ ಕಳವು ಪ್ರಕರಣ

0

 

20 ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾದ ಕಳ್ಳರು

ಸುಳ್ಯ ಹಳೆಗೇಟಿನಲ್ಲಿರುವ ಸುದ್ದಿ ಪತ್ರಿಕೆ ಏಜೆಂಟ್ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ನಿನ್ನೆ ರಾತ್ರಿ ನುಗ್ಗಿರುವ ಕಳ್ಳರು ಸುಮಾರು ೨೦ ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ಎಂದಿನಂತೆ ಬೆಳಿಗ್ಗೆ ಅಂಗಡಿ ಮಾಲಕರ ಮಗಳು ಬಂದು ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿದ್ದು, ಕೂಡಲೇ ಅವರು ತಮ್ಮ ತಂದೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ನಂತರ ಅವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಕಳ್ಳತನ ಮಾಡಿರುವವರು ಅಂಗಡಿಯ ಶಟರ್ ಬೀಗವನ್ನು ಮುರಿದಿರುವ ಶಂಕೆಯನ್ನು ಅಂಗಡಿ ಮಾಲಕರು ಹೇಳಿದ್ದು ಕ್ಯಾಶ್ ಕೌಂಟರಿನಲ್ಲಿದ್ದ ಸುಮಾರು ೨೦ ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ತೆಗೆದಿರುವ ಕಳ್ಳ, ಕ್ಯಾಶ್ ಕೌಂಟರ್ ಗೆ ನೀರನ್ನು ಹಾಕಿ ಹೋಗಿರುವುದಾಗಿ ಕಾಣಿಸುತ್ತಿದೆ. ಕಾರಣ ಕ್ಯಾಶ್ ಕೌಂಟರ್ ನಲ್ಲಿ ನೀರು ಚೆಲ್ಲಿರುವ ದೃಶ್ಯ ಕಂಡು ಬರುತ್ತಿದೆ ಎಂದು ಅವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here