ಸುಳ್ಯ : ಸಂತ ಜೋಸೆಫ್ ಶಾಲೆಯಲ್ಲಿ ದೀಪಾವಳಿ ಆಚರಣೆ

0

 

 

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಆ. 27 ರಂದು
ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ
ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ರೆ.ಫಾ.ವಿಕ್ಟರ್ ಡಿಸೋಜ,
ಕೆ.ಟಿ.ವಿಶ್ವನಾಥ್, ಹೈಸೂಲ್ ಪೋಷಕರ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್, ಪ್ರಾಥಮಿಕ
ಪೋಷಕರ ಸಮಿತಿಯ ಅಧ್ಯಕ್ಷರಾದ ದುರ್ಗಪ್ರಸಾದ್, ಮುಖ್ಯೋಪಾಧ್ಯಾಯಿನಿ ಸಿಸ್ಟರ್.ಬಿನೋಮ
ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿಗಳು
ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ಸಾರಿಕಾ ದೀಪಾವಳಿ ಆಚರಣೆಯ
ಮಹತ್ವವನ್ನು ಭಾಷಣದ ಮೂಲಕ ತಿಳಿಸಿದರು.
ಸುಳ್ಯ ವೆಂಕಟ್ರಮಣ ಸೊಸೈತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ರವರು ದೀಪಾವಳಿ ಆಚರಣೆಯ ಮೂಲ, ಇತಿಹಾಸ, ಮಹತ್ವವನ್ನು
ತಿಳಿಸಿದರು. ಹೈಸ್ಕೂಲ್ ಪೋಷಕರ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್ ಹಾಗೂ ಪ್ರಾಥಮಿಕ ಪೋಷಕರ ಸಮಿತಿಯ ಅಧ್ಯಕ್ಷರಾದ ದುರ್ಗಪ್ರಸಾದ್ ದೀಪಾವಳಿಯ
ಶುಭಾಶಯ ತಿಳಿಸಿದರು. ರೆ.ಫಾ.ವಿಕ್ಟರ್ ಡಿಸೋಜರವರು ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿನಿಯರಿಂದ ಸಮೂಹ ಗಾನ ಹಾಗೂ ನೃತ್ಯ ವಿನೋದ ನಡೆಯಿತು. ಸುಶಾಂತ್ ನಾಯಕ್ ಧನ್ಯವಾದ ಸಮರ್ಪಣೆಗೈದರು. ವಿದ್ಯಾರ್ಥಿ ವಿಸ್ಮಯ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here