ನೆಲ್ಯಾಡಿ: ಸರಣಿ ಕಳ್ಳತನ ಪ್ರಕರಣ – ಆರೋಪಿ ಹಾವೇರಿಯ ಈರಣ್ಣ ಬಂಧನ

0

 

 

ನೆಲ್ಯಾಡಿ: ಕಳೆದ ನವಂಬರ್ ತಿಂಗಳಿನಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ನಿವಾಸಿ ಈರಣ್ಣ ಬಂಧಿತ ಆರೋಪಿ.2021ರ ನ.9ರಂದು ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ ಅಂಗಡಿ, ಸಾಯಿ ಮೆಡಿಕಲ್, ಸಾಯಿ ಬೇಕರಿ, ಆದರ್ಶ ಫ್ಯಾನ್ಸಿ, ಸೀಗಲ್ ಅಡಿಕೆ ಅಂಗಡಿ, ಸುರಕ್ಷಾ ಫ್ಯಾನ್ಸಿ, ಟಿಂಕು ಸ್ಟೋರ್, ಅರುಣ್ ಸ್ವೀಟ್ಸ್‌ನಿಂದ ಸರಣಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಹಾವೇರಿ ನಿವಾಸಿ ಈರಣ್ಣ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಇತರೇ ಕಳ್ಳತನ ಪ್ರಕರಣದ ಆರೋಪಿಯೂ ಆಗಿದ್ದು ನೆಲ್ಯಾಡಿಯಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here