ಕಳಂಜದಲ್ಲಿ ಸುದ್ದಿ ಕೃಷಿ ಮಾಹಿತಿ ಕಾರ್ಯಾಗಾರ

0

 

ಸುದ್ದಿ ಕೃಷಿ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಕೃಷಿಕರೊಂದಿಗೆ ಸಮಾಲೋಚನೆ ಹಾಗೂ ಸಂವಾದ ಕಾರ್ಯಕ್ರಮ ಅ. 29 ರಂದು ಕಳಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಳಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ವಹಿಸಿದ್ದರು.

ಈ ಸಂದರ್ಭ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ। ಯು.ಪಿ ಶಿವಾನಂದ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿಕರು ತಮ್ಮ ತಮ್ಮ ಬೆಲೆಗಳನ್ನು ಯಾವ ರೀತಿ ಬೆಳೆಸ ಬೇಕೆಂಬುದರ ಬಗ್ಗೆ ತಲ್ಲೀನರಾಗಿದ್ದಾರೆ, ಗ್ರಾಮೀಣ ಪ್ರದೇಶದ ಕೃಷಿಕರ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಕೃಷಿಕರಿಗೆ ಮಾಹಿತಿ, ಇಲಾಖಾ ಮಾಹಿತಿ ಒದಗಿಸುವುದು ನಮ್ಮ ಉದ್ದೇಶ ಇದರಲ್ಲಿ ಭಾಗಿಯಾಗುವಂತೆ ಕೃಷಿಕರಿಗೆ ಕರೆಕೊಟ್ಟರು. ಕಳಂಜದಲ್ಲಿ ಹಿಂದೊಮ್ಮೆ ಗ್ರಾಮೋತ್ಸವ ಆಯೋಜಿಸಿದ್ದೆವು. ಅದು ಚೆನ್ನಾಗಿ ಮೂಡಿ ಬಂದಿತ್ತು. ಮಾದ್ಯಮಗಳು ಕೃಷಿಕರ ನ್ಯೂಸ್ ಮಾಡುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕೃಷಿಕರ ಮನೆಬಾಗಿಲಿಗೆ ಸೌಲಭ್ಯ, ಕೃಷಿಕೋದ್ಯಮ ಆಗಲಿ ಎಂದರು.

 

ಕಾರ್ಯಕ್ರಮದಲ್ಲಿ ಜೇನು ಕೃಷಿಯ ಬಗ್ಗೆ ಸೂರ್ಯನಾರಾಯಣ ಭಟ್ ಅವರು ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಕಳಂಜ ಬಾಳಿಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೂಸಪ್ಪ ಗೌಡ, ಪಿಡಿಒ ಕೀರ್ತಿಪ್ರಸಾದ್ ಉಪಸ್ಥಿತರಿದ್ದರು. ಸುದ್ದಿ ಕೃಷಿ ಕೇಂದ್ರದ ಕಾರ್ಯ ಚಟುವಟಿಕೆ ಬಗ್ಗೆ ಗಣೇಶ್ ಕಲ್ಚರ್ಪೆ ಮಾಹಿತಿಯನ್ನು ನೀಡಿದರು. ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಸ್ತಾವಿಕ ಮಾತಗಳನ್ನಾಡಿದರು. ಸುದ್ದಿ ಸಿಬ್ಬಂದಿ ಶಿವರಾಮ ಕಜೆಮೂಲೆ ಸ್ವಾಗತಿಸಿ, ಈಶ್ವರ ವಾರಣಾಸಿ ವಂದಿಸಿದರು, ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

 

 

 

LEAVE A REPLY

Please enter your comment!
Please enter your name here