ಸಂಜೀವಿನಿ ಸ್ವ-ಸಹಾಯ ಸಂಘಗಳ ಉದ್ಯಮ ಸದಸ್ಯರುಗಳಿಗೆ ಮಾಹಿತಿ

0

 

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣ ಸುಳ್ಯ ಇಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು
ತಾಲೂಕು ಪಂಚಾಯತ್, ಸುಳ್ಯ
ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ
UNDP- ಪ್ರಾಜೆಕ್ಟ್ ಕೋಡ್ ಉನ್ನತಿ ಸಹಭಾಗಿತ್ವದಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘಗಳ ಉದ್ಯಮ ಸದಸ್ಯರುಗಳಿಗೆ FSSAI ನೋಂದಾವಣಿ ಮತ್ತು MSME ನೋಂದಣಿ ಮತ್ತು pmfme ಮಾಹಿತಿ ಕಾರ್ಯಗಾರ ಅ.28 ರಂದು ನಡೆಯಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಪ್ರಾರಂಭ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತಾಲೂಕು ಪಂಚಾಯತ್ ಸುಳ್ಯ, ಇವರು ಮಾತನಾಡಿ ಮಹಿಳೆಯರು ತಮ್ಮ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಪ್ರಾರಂಭಿಸುವುದರ ಜೊತೆಗೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಯಕ್ರಮದಲ್ಲಿ ತಿಳಿಸಿದರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಶ್ ಮಾಬೀನ್ PMFME , ಯೋಜನೆಯ ಮಾಹಿತಿಯನ್ನು ತಿಳಿಸಿದರು ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಸುಳ್ಯ ಇಲ್ಲಿಯ ವಲಯ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀ ಆಶಿಕ್, ಇವರು FSSAI ಪ್ರಾಮುಖ್ಯತೆ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು, ಹಾಗೆಯೇ ಕಾರ್ಯಕ್ರಮದಲ್ಲಿ UNDP ಜಿಲ್ಲಾ ಸಂಯೋಜಕ ಶ್ರೀ ಶಿವಕುಮಾರ್,ಕೆ ಎಂ ಪ್ರಾಸ್ಥವಿಕವಾಗಿ ಮಾತನಾಡಿ ಪ್ರಾಜೆಕ್ಟ್ ಕೋಡ್ ಉನ್ನತಿ ಮಹಿಳೆಯರಿಗೆ ನೀಡುತ್ತಿರುವ ಉದ್ಯಮಶೀಲತೆಯ ತರಬೇತಿಗಳ ಬಗ್ಗೆ, MSME ನೋಂದಾವಣೆ ಮಾಡಿಸುವುದರ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ UNDP
ಸಿಬ್ಬಂದಿಗಳು ಲೀಡಿಯೋ ಗೊಂಸಾಲಿನ್, ದೀಕ್ಷಾ , ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಶ್ವೇತ ಎನ್,ಆರ್,ಎಲ್,ಎಂ ,ಅಮೂಲ್ಯ ಸಾಕ್ಷರತಾ ಕೇಂದ್ರ ಕೌನ್ಸಿಲರ್ ಶ್ರೀಮತಿ ಸುಜಾತ , ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ವಲಯ ಮೇಲ್ವಿಚಾರಕ ಮಹೇಶ್, BRP EP ಶ್ರೀಮತಿ ಜಯಲಕ್ಷ್ಮೀ,ವಲಯ ಮೇಲ್ವಿಚಾರಕ ಅವಿನಾಶ್ ಡೆಲ್ಲಾರಿಯೋ, ಸಂಜೀವಿನಿ ಒಕ್ಕೂಟದ 40 ಉದ್ಯಮ ಸದಸ್ಯರು ಭಾಗವಹಿಸಿದ್ದರು.19 ಮಹಿಳೆಯರಿಗೆ ಎಫ್ ಎಸ್ ಎಸ್ ಎ ಐ ಮತ್ತು 20 ಎಂಎಸ್ ಎಂಇ ನೋಂದಾವಣಿ ಮಾಡಲಾಯಿತು.

LEAVE A REPLY

Please enter your comment!
Please enter your name here