ಕುಂಬ್ರ ಹೊಟೇಲ್ ಅಲ್‌ರಾಯದಲ್ಲಿ ಆರಂಭಗೊಂಡಿದೆ:  ರಂಝಾನ್ ಇಫ್ತಾರ್ ಬಾಕ್ಸ್-ಕಡಿಮೆ ಬೆಲೆ, ಹೆಚ್ಚು ರುಚಿ

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 10 ಕಿ.ಮೀ ದೂರದಲ್ಲಿರುವ ಕುಂಬ್ರದ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಳೆದ 10 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಹೊಟೇಲ್ ಅಲ್‌ರಾಯ ಹವಾ ನಿಯಂತ್ರಿತ ಪ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ರಂಝಾನ್ ವಿಶೇಷ ಫುಡ್ ಬಾಕ್ಸ್ ಆರಂಭಗೊಂಡಿದೆ. ರಂಜಾನ್ ತಿಂಗಳ ಸಲುವಾಗಿ ಈ ವಿಶೇಷ ಫುಡ್ ಬಾಕ್ಸ್ ಅನ್ನು ಆರಂಭಿಸಲಾಗಿದ್ದು ಈಗಾಗಲೇ ಆರಂಭಗೊಂಡಿದೆ. ಕಡಿಮೆ ಬೆಲೆಗೆ ಹೆಚ್ಚು ಸ್ವಾದಿಷ್ಟಕರ ರುಚಿಯ ಫುಡ್ ಐಟಮ್‌ಗಳನ್ನು ಒಳಗೊಂಡ ಈ ಫುಡ್ ಬಾಕ್ಸ್ ಪ್ರತಿ ದಿನ ಸಂಜೆ 4 ರಿಂದ ಹೊಟೇಲ್‌ನಲ್ಲಿ ಲಭ್ಯವಿದೆ. ಗ್ರಾಹಕರು ಕೈಗೆಟಕುವ ಬೆಲೆಯಲ್ಲಿ ಎರಡು ಫುಡ್ ಬಾಕ್ಸ್‌ಗಳನ್ನು ನೀಡಲಾಗಿದೆ.

ಒಂದರಲ್ಲಿ ಚಿಕನ್ ಬಿರಿಯಾನಿ, 2 ಪರೋಟ, ವನ್‌ಪೀಸ್ ಚಿಕನ್ ಮಸಾಲ, ಅರ್ಧ ಲೀಟರ್ ನೀರು, ಫ್ರೆಶ್ ಜ್ಯೂಸ್, ಕರ್ಜೂರ ಸಹಿತ ವಿವಿಧ ಫ್ರುಟ್ಸ್ ಐಟಮ್‌ಗಳು ಮತ್ತು ಸಮೋಸ ಇದೆ. ಈ ಫುಡ್ ಬಾಕ್ಸ್ ಗ್ರಾಹಕರಿಗೆ ಕೇವಲ ರೂ. ರೂ.149 ಕ್ಕೆ ಲಭ್ಯವಿದೆ. ಇನ್ನೊಂದು ಫುಡ್ ಬಾಕ್ಸ್‌ನಲ್ಲಿ ಚಿಕನ್ ಬಿರಿಯಾನಿ, ಅರ್ಧ ಲೀಟರ್ ನೀರು, ಫ್ರೆಶ್ ಜ್ಯೂಸ್, ಕರ್ಜೂರ ಸೇರಿದಂತೆ ಫ್ರುಟ್ಸ್ ಐಟಮ್ಸ್ ಹಾಗೂ ಸಮೋಸ ಒಳಗೊಂಡಿದ್ದು ಇದು ಗ್ರಾಹಕರಿಗೆ ಕೇವಲ ರೂ.109-ಕ್ಕೆ ಲಭ್ಯವಿದೆ. ಸೀಮಿತ ಪ್ರದೇಶದ ವ್ಯಾಪ್ತಿಯೊಳಗೆ ಉಚಿತ ಹೋಂ ಡೆಲಿವರಿ ವ್ಯವಸ್ಥೆ ಇದೆ. ನಾರ್ತ್, ಸೌತ್ ಇಂಡಿಯನ್ ಹಾಗೂ ಚೈನೀಸ್ ಖಾದ್ಯಗಳು ಸೇರಿದಂತೆ ಜ್ಯೂಸ್, ಐಸ್‌ಕ್ರೀಮ್ ಐಟಂಗಳು ಲಭ್ಯವಿದೆ. ಹೆಚ್ಚಿನ ಮಾಹಿತಿ ಮತ್ತು ಫುಡ್ ಬಾಕ್ಸ್ ಆರ್ಡರ್‌ಗೆ ಮೊ. 9535627300, 9611818900 ಗೆ ಸಂಪರ್ಕಿಸಬಹುದಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೊಟೇಲ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here