ರೂ.1.18 ಕೋಟಿ ವೆಚ್ಚದ ಪುತ್ತೂರು ಪೇಟೆ ಸಂಪರ್ಕದ ಚತುಷ್ಪತ ರಸ್ತೆ ಕಾಮಗಾರಿ ಪ್ರಗತಿ

0

  •  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಲೋಕಾರ್ಪಣೆ – ಸಂಜೀವ ಮಠಂದೂರು

ಪುತ್ತೂರು: ನಗರಸಭೆ ರೂ.18 ಲಕ್ಷ ಮತ್ತು ಲೋಕೋಪಯೋಗಿ ಇಲಾಖೆಯ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಬೊಳುವಾರು ಸಮೀಪದ ಮಂಜಲ್ಪಡ್ಪುವಿನಿಂದ ಪುತ್ತೂರು ಪೇಟೆ ಸಂಪರ್ಕ ಸೇತುವೆ ಅಗಲೀಕರಣ ಹಾಗು ಚತುಷ್ಪತ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು ಶಾಸಕ ಸಂಜೀವ ಮಠಂದೂರು ಅವರು ಎ.5 ರಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಮಹಾಲಿಂಗೇಶ್ವರ ದೇವರ ಜಾತ್ರೆಗೆ ಲೋಕಾರ್ಪಣೆ :
ಶಾಸಕ ಸಂಜೀವ ಮಠಂದೂರು ಅವರು ಈ ಸಂದರ್ಭದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ ನಗರಸಭೆಯಿಂದ ರೂ. 18 ಲಕ್ಷ ಮತ್ತು ಲೋಕೋಪಯೋಗಿ ಇಲಾಖೆಯಿಂದ ರೂ. 1 ಕೋಟಿ ವೆಚ್ಚದಲ್ಲಿ ಮಂಜಲ್ಪಡ್ಪು ಕಿರಿದಾದ ತಿರುವು ರಸ್ತೆಯನ್ನು ಅಗಲೀಕರಣಗೊಳಿಸಿ ಚತುಷ್ಪತ ರಸ್ತೆ ಮಾಡುವ ಮೂಲಕ ವಾಹನ ಸವಾರರಿಗೆ ಪ್ರಯಾಣ ಮಾಡಲು ಅನುಕೂಲ ಮಾಡಲಾಗುತ್ತಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಶುಭ ಸಂದರ್ಭದಲ್ಲಿ ರಸ್ತೆ ಮತ್ತು ಸೇತುವೆ ಲೋಕಾರ್ಪಣೆಯನ್ನು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಮಾಡಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಸಭೆ ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here