ಪುತ್ತೂರು: ತತ್ವ ಸ್ಕೂಲ್ ಆಫ್ ಆರ್ಟ್‌ ನಲ್ಲಿ ಸಮ್ಮರ್‍ ವರ್ಕ್‌ಶಾಪ್ ಉದ್ಘಾಟನೆ

0

  • 10 ದಿನಗಳ ಕಾಲ ನಡೆಯಲಿದೆ ಬೇಸಿಗೆ ಶಿಬಿರ

ಪುತ್ತೂರು: ತತ್ವ ಸ್ಕೂಲ್ ಆಫ್ ಆರ್ಟ್‌ ಪುತ್ತೂರು ಇಲ್ಲಿ ಬೇಸಿಗೆ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 10 ದಿನಗಳ ಕಾಲ ನಡೆಯಲಿರುವ ಈ ಕಾರ್ಯಗಾರದಲ್ಲಿ ವಿವಿಧ ಕ್ಷೇತ್ರದ ಕಲಾವಿದರು ಆಗಮಿಸಿ ತರಬೇತಿ ನೀಡಲಿದ್ದಾರೆ.

ಕಾರ್ಯಗಾರದ ಉದ್ಘಾಟನೆಯನ್ನು ತತ್ವ ಸ್ಕೂಲ್ ಆಫ್ ಆರ್ಟ್‌‌ನ ನಿರ್ದೇಶಕ ಟೀಲಾಕ್ಷ ನೆರವೇರಿಸಿದರು. ಈ ವೇಳೆ ಚಿತ್ರಕಲಾ ಅಧ್ಯಾಪಕ, ಕಲಾವಿದ ಚೇತನ್ ಕುಮಾರ್‍ ವಿಟ್ಲ, ತತ್ವ ಸ್ಕೂಲ್ ಆಫ್ ವಿಟ್ಲ ಇಲ್ಲಿನ ಶಿಕ್ಷಕಿ ಜಯಲಕ್ಷ್ಮಿ. ಜಿ, ಲವ್ಯಶ್ರೀ, ಭೂಮಿಕಾ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತತ್ವ ಸ್ಕೂಲ್ ಆಫ್ ಆರ್ಟ್‌ನ ಪ್ರಾಂಶುಪಾಲರಾದ ರಶ್ಮಿ ಶೆಟ್ಟಿ ನಿರೂಪಿಸಿದರು. ಪೃತ್ವಿಕ್, ರತುಲ್ ಅದ್ವೈತ್ ಪ್ರಾರ್ಥಿಸಿದರು.

 


ಎ.12 ರಿಂದ ಆರಂಭವಾಗಿ ಎ.22 ಕಾರ್ಯಗಾರ ನಡೆಯಲಿದೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಕಲಾವಿದ ತಾರನಾಥ ಕೈರಂಗಳ, ಕಲಾವಿದ ಸುಧೀರ್‌ ಕುಮಾರ್ ಜಿ. ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಉದಯ್ ವಿಟ್ಲ, ಆರ್‌ ಕೆ ಆರ್ಟ್ಸ್‌ ಚಿಣ್ಣರ ಮನೆ (ರಿ) ಇದರ ನಿರ್ದೇಶಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್‌ ವಿಟ್ಲ, ವೃತ್ತಿಪರ ಕಲಾವಿದ ಮನೋಜ್ ಕನಪ್ಪಾಡಿ, ಕಲಾವಿದ, ಚಿತ್ರಕಲಾ ಶಿಕ್ಷಕ ಚೇತನ್ ವಿಟ್ಲ, ಕಲಾವಿದ ಭಾವನ್‌, ಹವ್ಯಾಸಿ ಕಲಾವಿದ ದಿನೇಶ್ ಸಿಎಚ್, ಯುವ ಕಲಾವಿದೆ ಅರ್ಪಿತಾ ವಿಟ್ಲ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here