ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಯುರೇಕಾ ರಾಜ್ಯ ಮಟ್ಟದ ವಿಜ್ಞಾನ ಶಿಬಿರ

0

  • ಶಿಬಿರದ ಮೂರನೇ ದಿನದಂದು ವಿಜ್ಞಾನ ಪ್ರಯೋಗಗಳ ಮೂಲಕ ಕಲಿಕೆ

 


ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಯುರೇಕಾ ರಾಜ್ಯ ಮಟ್ಟದ ವಿಜ್ಞಾನ ಶಿಬಿರದ ಮೂರನೇ ದಿನ ಪಿಯುಸಿ ಶಿಕ್ಷಣದಲ್ಲಿ ವಿಜ್ಞಾನಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕಲಿಕೆಯನ್ನು ಆಯೋಜಿಸಲಾಯಿತು. ಒಟ್ಟು ಮೂರು ಅವಧಿಯಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲನೇ ಅವಧಿಯಲ್ಲಿ ಭೌತಶಾಸ್ತ್ರ ವಿಷಯದ ತರಗತಿಯನ್ನು ಉಪನ್ಯಾಸಕಿ ತುಷಾರ ನಿರ್ವಹಿಸಿ ದೈನಂದಿನ ಬದುಕಿನಲ್ಲಿ ಬರುವ ಕೆಲವು ಭೌತಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾದ ಮಾಹಿತಿಯನ್ನು ನೀಡಿದರು. ಜೊತೆಗೆ ಜೆಇಇ, ನೀಟ್, ಸಿಇಟಿ ಪರೀಕ್ಷೆಗಳಿಗೆ ತಯಾರಿಯ ಬಗ್ಗೆಯು ತರಗತಿ ನಡೆಯಿತು. ಎರಡನೇ ಮತ್ತು ಮೂರನೇ ಅವಧಿಯಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಪ್ರಯೋಗಗಳ ಮೂಲಕ ವೀಕ್ಷಣೆಗ ಅವಕಾಶ ಕಲ್ಪಿಸಲಾಗಿತ್ತು. ರಸಾಯನ ಶಾಸ್ತ್ರ ಪ್ರಯೋಗಾಲಯದಲ್ಲಿ ವಿವಿಧ ನಿರವಯವ ಲವಣಗಳ ಪರಿಚಯ, ಗುಣ ಲಕ್ಷಣ, ಪ್ಲೇಮ್‌ಟೆಸ್ಟ್, ಟೈಟ್ರೇಷನ್, ಸಾವಯವ ಸಂಯುಕ್ತಗಳ ಬಣ್ಣ, ಪರಿಮಳ ಇತ್ಯಾದಿಗಳನ್ನು ಪ್ರಯೊಗಗಳ ಮೂಲಕ ಪರಿಚಯ ಮಾಡಿಕೊಡಲಾಯಿತು. ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ನ್ಯೂಟನ್ ಚಲನ ನಿಯಮಗಳ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಲಾಯಿತು. ಜೀವಶಾಸ್ತ್ರ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ, ರಕ್ತದ ಗುಂಪು ಪತ್ತೆ ಹಚ್ಚುವಿಕೆ, ಸಸ್ಯ ಜೀವಕೋಶದಲ್ಲಿ ನ್ಯೂಕ್ಲಿಯಸ್‌ನ ಪತ್ತೆ ಹಚ್ಚುವಿಕೆ, ರಸಾಯನಿಕ ಪರೀಕ್ಷೆಗಳ ಮೂಲಕ ಕಾರ್ಬೋಹೈಡ್ರೇಟ್, ಪ್ರೋಟಿನ್‌ಗಳ ಪತ್ತೆ ಹಚ್ಚುವಿಕೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ನಡೆಯಿತು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಸಿಂಪಲ್ ಪೆಂಡ್ಯುಲಮ್ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಸ್ವತಃ ಅಭ್ಯಸಿಸಿದಾಗ ವಿಜ್ಞಾನದೆಡೆಗೆಇನ್ನಷ್ಟು ಆಸಕ್ತಿ ಮೂಡಿತು ಎಂದು ವಿಟ್ಲದ ಜೇಸಿಸ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಹರ್ಷಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here