ಏ.24: ಮಿತ್ತೂರಿನಲ್ಲಿ ಶುಭೋದಯ ಫ್ಯೂಯೆಲ್ಸ್ ಶುಭಾರಂಭ

0

ವಿಟ್ಲ:  ಮಾಣಿ-ಮೈಸೂರು ಹೆದ್ದಾರಿಯ ಮಿತ್ತೂರಿನಲ್ಲಿ ಎಂ.ಆರ್.ಪಿ.ಎಲ್. ನ HiQನ ಘಟಕ ಶುಭೋದಯ ಫ್ಯೂಯೆಲ್ಸ್ ಏ.24ರಂದು ಶುಭಾರಂಭಗೊಳ್ಳಲಿದೆ. ಸಂಸ್ಥೆಯನ್ನು ಎಸ್.ಆರ್.ರಂಗಮೂರ್ತಿ ಪುಣಚರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ವಹಿಸಲಿದ್ದಾರೆ.

 

ಮುಖ್ಯ ಅತಿಥಿಗಳಾಗಿ ಎಂ.ಆರ್.ಪಿ.ಎಲ್ ನ ಹಣಕಾಸು ವಿಭಾಗದ‌ ನಿರ್ದೇಶಕರಾದ ಪೊಮಿಲಾ ಜಸ್ಪಾಲ್, ಎಂ.ಆರ್.ಪಿ.ಎಲ್ ನ ಮಾರ್ಕೆಟಿಂಗ್ ಗ್ರೂಪ್ ಜನರಲ್ ಮೆನೇಜರ್  ಸತ್ಯನಾರಾಯಣ ಹೆಚ್.ಸಿ.,  ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಯಸ್. ಮುಕ್ಕುಡ,   ಸುಬ್ರಮಣ್ಯ ಭಟ್ ಕೆ. ಉರಿಮಜಲು, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು,  ಇಡ್ಕಿದು ಗ್ರಾ.ಪಂ. ಅಧ್ಯಕ್ಷರಾದ ಎಂ. ಸುಧೀರ್‌ಕುಮಾರ್ ಶೆಟ್ಟಿ ಮಿತ್ತೂರು, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮಿತ್ತೂರು ಮೊದಲಾದವರು ಆಗಮಿಸಲಿದ್ದಾರೆ ಎಂದು‌ ಸಂಸ್ಥೆಯ ಮಾಲಕರಾದ ಬೈಪದವು ಗೋಪಾಲಕೃಷ್ಣ ಭಟ್ ರವರು ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here