ಮೇ.14 : ಕೊಡಂಗೆ ಶ್ರೀಬಲಜಲಾಯ ದೈವಸ್ಥಾನದ ವರ್ಷಾವಧಿ ಪೂಜೆ ಹಾಗೂ ನೇಮ

0

 

ಪುತ್ತೂರು: ತೆಂಕಿಲ ಕೊಡಂಗೆ ಮನೆಯಲ್ಲಿ ಶ್ರೀಬಲಜಲಾಯ ದೈವಸ್ಥಾನದ ವರ್ಷಾವಧಿ ಪೂಜೆ ಹಾಗೂ ನೇಮ ಮೇ.14 ರಂದು ನಡೆಯಲಿದೆ. ಬೆಳಿಗ್ಗೆ 8.30ರಿಂದ ಗಣಹೋಮ, ವೆಂಕಟರಮಣ ದೇವರ ಮುಡಿಪು ಸೇವೆ, ನಾಗತಂಬಿಲ, ರಕ್ತೇಶ್ವರಿ ತಂಬಿಲ ಹಾಗೂ ಗುಳಿಗ ತಂಬಿಲ, ಮಧ್ಯಾಹ್ನ 12.30ಕ್ಕೆ ಬಲಜಲಾಯ ದೈವದ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ ನಂತರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಕೊಡಂಗೆ ಜಯರಾಮ ನಾಯ್ಕ್ ಮತ್ತು ಸಹೋದರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here