ಇನ್ಲ್ಯಾಂಡ್ ಮಯೂರದಲ್ಲಿ ಖಲಂದರಿಯ ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು : ಕಳೆದ 37ವರ್ಷಗಳಿಂದ ಮುರದಲ್ಲಿ ಕಾರ್ಯಾಚರಿಸುತ್ತಿದ್ದ ,ಅಬ್ದುಲ್ ರಹಿಮಾನ್ ಇವರ ಮಾಲೀಕತ್ವದ ಖಲಂದರಿಯ ರೆಸ್ಟೋರೆಂಟ್ ಬೊಳುವಾರು ಇನ್‌ಲ್ಯಾಂಡ್ ಮಯೂರದ ಪ್ರಥಮ ಮಹಡಿಯಲ್ಲಿ ಸ್ಥಳಾಂತರಗೊಂಡು ಮೇ.16ರಂದು ಶುಭಾರಂಭಗೊಂಡಿತ್ತು.

ಧರ್ಮ ಗುರು ಅಸಯ್ಯದ್ ಫಝಲ್ ಕೋಯಮ್ಮ ತಂಞಳ್ ಕೂರತ್ ವಿನೂತನ ರೆಸ್ಟೋರೆಂಟ್ ಮಾಳಿಗೆಗೆ ಶುಭ ಹಾರೈಸಿ ,ಅಭಿನಂದಿಸಿದರು.ಅತಿಥಿಗಳಾಗಿ ಸಿವಿಲ್ ಇಂಜಿನಿಯರ್ ಸನದ್ ಯೂಸುಫ್ ಪುತ್ತೂರು ,ಇನ್ನೋರ್ವ ಸಿವಿಲ್ ಇಂಜಿನಿಯರ್ ನೌಫಲ್ ನೆಕ್ಕಿಲಾಡಿ ,ಶಮೀಮ್ ಮೊಹಮ್ಮದ್ ಪುತ್ತೂರು ಸಹಿತ ಹಲವರು ಭೇಟಿ ನೀಡಿ ಹಾರೈಸಿದರು. ಮಾಲಕ ಅಬ್ದುಲ್ ರಹಿಮಾನ್ ಮಾತನಾಡಿ ,ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 6 ರಿಂದ ಸಂಜೆ 6 ರ ತನಕವೂ ಸಂಪೂರ್ಣ ಊರ ಶೈಲಿಯ ಶುಚಿ ರುಚಿಯಾದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಹಾರಗಳು ಮಿತದರದಲ್ಲಿ ಲಭ್ಯವಿದೆಯೆಂದು ತಿಳಿಸಿ, ಸಹಕಾರ ಯಾಚಿಸಿದರು.

LEAVE A REPLY

Please enter your comment!
Please enter your name here