ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ-ನೂತನ ದೈವಸ್ಥಾನ, ತರವಾಡು ಮನೆಯ ಗೃಹಪ್ರವೇಶ, ಧರ್ಮನೇಮೋತ್ಸವ ಸಂಪನ್ನ

0

 

 

ಪುತ್ತೂರು: ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ಮೇ.14ರಿಂದ ಮೇ.18ರ ವರೆಗೆ ನಡೆಯಲಿರುವ ಶ್ರೀ ಧೂಮಾವತಿ – ಬಂಟ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಜಾವತೆ, ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀದೈವಗಳ ಧರ್ಮನೇಮೋತ್ಸವದ ನಾಲ್ಕನೇ ದಿನವಾದ ಮೇ.17ರಂದು ಸಾಯಂಕಾಲ 6 ಗಂಟೆಯಿಂದ ಶ್ರೀ ಧರ್ಮದೈವ ಧೂಮಾವತಿ – ಬಂಟ ದೈವಗಳ ಬಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಧರ್ಮದೈವ ಶ್ರೀ ಧೂಮಾವತಿ – ಬಂಟ ದೈವದ ನೇಮೋತ್ಸವ ನಡೆಯಿತು. ಬಳಿಕ ಗುಳಿಗ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯುವುದರೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಸಂಸದರಾದ ನಳೀನ್ ಕುಮಾರ್ ಕಟೀಲ್, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಸೇರಿದಂತೆ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರನ್ನು ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಕೆ.ಸಿ.ನಾಯ್ಕ್ ಹಾಗೂ ಕುಟುಂಬಸ್ಥರು ಬರಮಾಡಿಕೊಂಡು ಸ್ವಾಗತಿಸಿದರು.

ಸ್ಥಳದಾನಿಗಳಿಗೆ ಕುಟುಂಬಸ್ಥರ ವತಿಯಿಂದ ಸನ್ಮಾನ: ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆ ನಿರ್ಮಾಣಕ್ಕೆ ಸ್ಥಳವನ್ನು ನೀಡಿದ ದಾನಿಗಳಾದ ಬಾಲಕೃಷ್ಣ ನಾಯ್ಕ್, ರಾಧಾಕೃಷ್ಣ ನಾಯ್ಕ್ ಮೈಸೂರು, ಶ್ರೀನಿವಾಸ ನಾಯ್ಕ್ ಹಣಿಯೂರು, ಅಶೋಕ್ ನಾಯ್ಕ್ ಹಣಿಯೂರು, ಪುರುಷೋತ್ತಮ ನಾಯ್ಕ್ ಹಣಿಯೂರುರವರ ಪೈಕಿ ರಾಧಾಕೃಷ್ಣ ನಾಯ್ಕ್ ದಂಪತಿ ಮೈಸೂರು ಶ್ರೀನಿವಾಸನಾಯ್ಕ್ ದಂಪತಿ ಹಣಿಯೂರು, ಅಶೋಕ್ ನಾಯ್ಕ್ ದಂಪತಿ ಹಣಿಯೂರು, ಪುರುಷೋತ್ತಮ ನಾಯ್ಕ್ ದಂಪತಿ ಹಣಿಯೂರುರವರನ್ನು ಕುಟುಂಬಸ್ಥರ ಪರವಾಗಿ ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಕೆ.ಸಿ.ನಾಯ್ಕ್  ರವರು ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ.ಕೆ.ಸಿ.ನಾಯ್ಕ್  ರವರು ನಮ್ಮ ಕುಟುಂಬ ಇಷ್ಟೊಂದು ದೊಡ್ಡದಾಗಿ ಬೆಳೆದಿದೆ ಎನ್ನಲು ತುಂಬಾ ಹೆಮ್ಮೆಯಾಗುತ್ತಿದೆ. ನಾವೆಲ್ಲರೂ ಸಂತಸದ ಕ್ಷಣದಲ್ಲಿದ್ದೇ ವೆ. ನಮ್ಮೆಲ್ಲರ ಕನಸು ನನಸಾಗಿರುವ ಶುಭಸಂದರ್ಭವೂ ಇದಾಗಿದೆ. ಹಣಿಯೂರು ಗುತ್ತಿನ ಈ ಒಂದು ಕಾರ್ಯಕ್ರಮ ಎಲ್ಲರೂ ಕೊಂಡಾಡುವಂತಾಗಿದ್ದು, ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕ್ಷಣವಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಸಹಕಾರ ಮಾಡಿದ ಎಲ್ಲರನ್ನೂ ಈ ಸಂದರ್ಬದಲ್ಲಿ ನೆನೆಸಿಕೊಂಡ ಅವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here