ಅತ್ತಾಳ ಕುಟುಂಬದ ಶ್ರೀಮಲ್ಲಿಕಾರ್ಜುನ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ದೇವರ ಮೂರ್ತಿ, ಕಲಶ ಮೆರವಣಿಗೆ

0


ಪುತ್ತೂರು: ಸುಮಾರು 300 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ರಾಮಕ್ಷತ್ರಿಯ ಸಮಾಜದ ಪುತ್ತೂರು ಕೆಮ್ಮಿಂಜೆಯ ಅತ್ತಾಳ ಕುಟುಂಬದ ಆರಾಧ್ಯ ದೇವರಾದ ಶ್ರೀ ಮಲ್ಲಿಕಾರ್ಜುನ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮರಕಡದ ಶ್ರೀ ಗುರು ಪರಾಶಕ್ತಿ ಮಠದ ಸಂಸ್ಥಾಪಕರಾದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರ ಅನುಗ್ರಹದೊಂದಿಗೆ ಕೆಮ್ಮಿಂಜೆಯ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಜೂ. 11 ರಿಂದ ಆರಂಭಗೊಂಡಿತು.

ಜೂ.11ರಂದು ಸಂಜೆ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ಪ್ರಾಸಾದ ಶುದ್ಧಿ, ರಕ್ಷೆಘ್ನಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಪಾಲ ಬಲಿ, ರಕ್ಷೆ ನಡೆಯಿತು. ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಶ್ರೀಮಹಾವಿಷ್ಣು ದೇವಸ್ಥಾನದಿಂದ ಶ್ರೀಮಲ್ಲಿಕಾರ್ಜುನ ದೇವರ ಮೂರ್ತಿ ಹಾಗೂ ಕಲಶವನ್ನು ಮೆರವಣಿಗೆ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ತರಲಾಯಿತು. ಅತ್ತಾಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಜೂ.12ರಂದು ಬೆಳಿಗ್ಗೆ ಮಹಾಗಣಪತಿಹೋಮ, ಪ್ರಾಯಶ್ಚಿತ ಹೋಮ, ಶಾಂತಿಹೋಮ, ಬಿಂಬಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಬಿಂಬಾಧಿವಾಸ, ಬ್ರಹ್ಮಕಲಶಪೂಜೆ, ಅದಿವಾಸ ಹೋಮ ನಡೆಯಲಿದೆ.

LEAVE A REPLY

Please enter your comment!
Please enter your name here