ಬೆಳಂದೂರು ಪ್ರಗತಿ ಸಂಜೀವಿನಿ ಒಕ್ಕೂಟದ ಮಹಾಸಭೆ- ಪದಗ್ರಹಣ ಕಾರ್ಯಕ್ರಮ

0

ಕಾಣಿಯೂರು: ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಂದೂರು ಇದರ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಕಾವ್ಯ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ ಬರೆಪ್ಪಾಡಿ ದ್ವಾಕ್ರ ಕಟ್ಟಡದಲ್ಲಿ ನಡೆಯಿತು.

 

ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಮಾತನಾಡಿ, ಸರಕಾರದಿಂದ ಬರುವ ಸಮುದಾಯ ಬಂಡವಾಳ ನಿಧಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸಂಘದ ಸದಸ್ಯರು ಯಶಸ್ಸನ್ನು ಗಳಿಸಬೇಕು ಎಂದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣರವರು ಮಾತನಾಡಿ, ಮಹಿಳೆಯರು ಸ್ವ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಬೇಕು. ಪಡೆದುಕೊಂಡ ಸಮುದಾಯ ಬಂಡವಾಳ ನಿಧಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ನಿರಂತರ ಮರುಪಾವತಿ ಮಾಡಬೇಕು ಎಂದರು. ಒಕ್ಕೂಟದ ಅಧ್ಯಕ್ಷೆ ಕಾವ್ಯ ಮಾತನಾಡಿ, ಪಂಚಾಯತ್‌ನಿಂದ ಸಹಕಾರ, ಎಲ್ಲಾ ಸಂಘಗಳ ಸದಸ್ಯರ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಪ್ರಗತಿ ಸಂಜೀವಿನಿಯು 2 ವರ್ಷಗಳನ್ನು ಪೂರೈಸಿದೆ. ಪ್ರಗತಿ ಸಂಜೀವಿನಿ ಒಕ್ಕೂಟವನ್ನು ಮಾದರಿ ಒಕ್ಕೂಟವನ್ನಾಗಿ ಮಾಡುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು. ಗ್ರಾ.ಪಂ, ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ಗೀತಾ ಕುವೇತ್ತೋಡಿ, ತಾರಾ ಅನ್ಯಾಡಿ, ಪಾರ್ವತಿ ಮರಕ್ಕಡ, ಪ್ರವೀಣ್ ಕೆರೆನಾರ್, ತಾ.ಪಂ. ಮಾಜಿ ಉಪಾಧ್ಯಕ್ಷೆ ಲಲಿತಾ ಈಶ್ವರ್, ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷೆ ಜಯಂತಿ, ಕಾರ್ಯದರ್ಶಿ ವಾರಿಜಾ, ಕೋಶಾಧಿಕಾರಿ ಸುಧಾ, ಪದಾಧಿಕಾರಿಗಳಾದ ಸತ್ಯಲತಾ, ಭಾಗೀರಥಿ, ಮೀನಾಕ್ಷಿ, ಉಮಾ ಡಿ.ಎಸ್, ಪ್ರೇಮಲತಾ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಾದ ಸರೋಜಿನಿ, ಸರಸ್ವತಿ ಉಪಸ್ಥಿತರಿದ್ದರು. ಎಂ.ಬಿ.ಕೆ ಗೌರಿ ಪ್ರಾರ್ಥಿಸಿ, ವರದಿ ವಾಚಿಸಿದರು. ಎಲ್‌ಸಿಆರ್‌ಪಿ ಸವಿತಾ ಸ್ವಾಗತಿಸಿದರು. ಎಫ್‌ಎಲ್‌ಸಿಆರ್‌ಪಿ ಮೋಹಿನಿ ಪಿಎಂಎಸ್‌ಬಿವೈ ಪಿಎಂಜೆಬಿವೈ ಬಗ್ಗೆ ಮಾಹಿತಿ ನೀಡಿದರು. ಎಲ್‌ಸಿಆರ್‌ಪಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಂದೂರು ಇದರ ಅಧ್ಯಕ್ಷರಾಗಿ ಕಾವ್ಯ ಬಿ.ಕೆಹಾಗೂ ಕಾರ್ಯದರ್ಶಿಯಾಗಿ ವಾರಿಜ ಇವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಲಲಿತಾ ಈಶ್ವರ, ಜತೆ ಕಾರ್ಯದರ್ಶಿಯಾಗಿ ಜಯಂತಿ ಕೆ.ಆರ್, ಕೋಶಾಧಿಕಾರಿಯಾಗಿ ಸುಧಾ, ಪದಾಧಿಕಾರಿಗಳಾಗಿ ವನಜ, ಪಾರ್ವತಿ, ಸುಂದರಿ, ಸೀಮಾ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here