ಪಿಲಿಂಜ ಶೇಷಪ್ಪ ನಲಿಕೆರರ ಮನೆಯ ಬದಿ ಕುಸಿತ : ಅಶೋಕ್ ರೈರವರಿಂದ ನೆರವಿನ ಭರವಸೆ

0

ಪುತ್ತೂರು : ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ಹರಿಜನ ಕಾಲೋನಿ ನಿವಾಸಿ ಶೇಷಪ್ಪ ನಲಿಕೆ ಎಂಬವರ ಮನೆಯ ಅಂಗಳದ ಎಡ ಬದಿಯ ಭಾಗವು ಕುಸಿದಿದ್ದು ಮನೆಯು ಕೂಡ ಕುಸಿಯುವ ಹಂತದಲ್ಲಿದೆ. ತೀರ ಬಡವರಾದ ಇವರು ಮನೆಯು ಕುಸಿದಲ್ಲಿ ವಾಸಿಸಲು ಮನೆಯಿಲ್ಲದೆ ಸಂಕಷ್ಟಪಡುವ ಪರಿಸ್ಥಿತಿಯಲ್ಲಿದ್ದಾರೆ. ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಈ ಮನೆಗೆ ಭೇಟಿ ಮಾಡಿ ಕುಸಿತಗೊಳ್ಳುತ್ತಿರುವ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.


ಸ್ಥಳೀಯರಾದ ಎಲ್ಯಣ್ಣಪೂಜಾರಿ ಹಲಸಿನ ಕಟ್ಟೆ, ಲೋಹಿತ್ ಪಿಲಿಂಜ, ವೀರಪ್ಪಪೂಜಾರಿ ಬದಿಗುಡ್ಡೆ, ಶ್ರೀನಿವಾಸ ಪೂಜಾರಿ ಬಡಿಗುಡ್ಡೆ, ನಾರಾಯಣ ಪೂಜಾರಿ ಬದಿಗುಡ್ಡೆ, ಸಂದೀಪ್ ಪಿಲಿಂಜ, ಪ್ರಜ್ವಲ್ ಪಿಲಿಂಜ, ಪೂವಪ್ಪ ಕುಕ್ಕುದಡ್ಕ, ಶಶೀಧರ್ ಕಳುವಾಜೆ, ಜಗನಾಥ ಮೂಲ್ಯ, ಕ್ರಷ್ಣ ಗೌಡ ಪಿಲಿಂಜ, ಚಂದ್ರಗೌಡ ಪಿಲಿಂಜ, ಚಂದ್ರಹಾಸ ಹಲಸಿನಕಟ್ಟೆ, ತಾರಾನಾಥ ಪಿಲಿಂಜ, ಸತೀಶ್ ಪೂಜಾರಿ ಪಿಲಿಂಜ, ರಾಮಣ್ಣ ಪಿಲಿಂಜ, ಕುಜುಂಬ ನಲಿಕೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here